ಬೆಂಗಳೂರು: ಕನ್ನಡದ ಮೇರು ನಟ ಡಾ. ವಿಷ್ಣುವರ್ಧನ್ ಕುರಿತು ತೆಲುಗಿನ ನಟ ವಿಜಯ್ ರಂಗರಾಜ್ ಆಡಿರುವ ಆಕ್ಷೇಪಾರ್ಹ ಮಾತುಗಳಿಗೆ ನಟ 'ಆ ದಿನಗಳು' ಚೇತನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶನಿವಾರ ಸಾಮಾಜಿಕ ತಾಣ ಫೇಸ್ಬುಕ್ನಲ್ಲಿ ಪೋಸ್ಟ್ ಪ್ರಕಟಿಸಿರುವ ಚೇತನ್, 'ವಿಷ್ಣುವರ್ಧನ್ ಅವರ ವಿರುದ್ಧ ವಿಜಯ್ ರಂಗರಾಜ್ ನೀಡಿದ ಹೇಳಿಕೆಯನ್ನು ನಾನು ನೋಡಿದೆ. ರಂಗರಾಜ್ ಅವರ ಮಾತುಗಳು ಅಸಹ್ಯ ಮತ್ತು ಸೂಕ್ತವಲ್ಲದ್ದು. ಹೌದು, ಜನರ ಒಟ್ಟಿಗೆ ಕೆಲಸ ಮಾಡುವಾಗ ಪರಸ್ಪರ ಘರ್ಷಣೆಗಳು ಸಂಭವಿಸಬಹುದು. ಮತ್ತು ವೈಯಕ್ತಿಕ ಸ್ಮರಣೆಗೆ ಅನುಗುಣವಾಗಿ ಸತ್ಯವು ಭಿನ್ನವಾಗಿರುತ್ತದೆ. ಆದರೆ, ನಾಲಿಗೆಯ ಸಭ್ಯತೆ ಅತ್ಯಗತ್ಯ,' ಎಂದು ಅವರು ಪೋಸ್ಟ್ ಪ್ರಕಟಿಸಿದ್ದಾರೆ.

ತೆಲುಗಿನ ನಟ ವಿಜಯ್ ರಂಗರಾಜು ಅವರು ಸಂದರ್ಶನವೊಂದರಲ್ಲಿ ವಿಷ್ಣು ಕುರಿತು ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದು, ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ, ವಿಜಯ್ ರಂಗರಾಜ್ ವಿರುದ್ಧ ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.