ಬೆಂಗಳೂರು:ಕನ್ನಡದ ಹಾಸ್ಯನಟ ಮೋಹನ್ ಜುನೇಜ (54) ಅವರು ಅನಾರೋಗ್ಯದಿಂದ ಶುಕ್ರವಾರತಡರಾತ್ರಿ ನಿಧನರಾದರು.

ಮೋಹನ್ಅವರನ್ನು ಚಿಕ್ಕಬಾಣಾವರದ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

‘ಚೆಲ್ಲಾಟ’, ‘ಜೋಗಿ’, ‘ಚೆಲ್ಲಾಟ’, ಕೆಜಿಎಫ್ ಚಾಪ್ಟರ್ 1 ಮತ್ತು 2 ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳು ಹಾಗೂ ಹಲವಾರು ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ‘ಕೆಜಿಎಫ್ ಚಾಪ್ಟರ್ 1’ನಲ್ಲಿ ಅವರು ರಾಕಿ ಭಾಯ್ ಬಗ್ಗೆ ವಿವರಣೆ ನೀಡುತ್ತಾ, ‘ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್ ಸ್ಟರ್...ಅವನು ಒಬ್ಬನೇ ಬರೋನು..ಮಾನ್ಸ್ಟರ್’ ಎಂದು ಹೇಳುವ ಸಂಭಾಷಣೆ ಜನಪ್ರಿಯವಾಗಿತ್ತು. ಹಾಸ್ಯ, ಖಳ ಸೇರಿದಂತೆ ವಿವಿಧ ಪೋಷಕ ಪಾತ್ರಗಳಲ್ಲಿ ಯಾವುದೇ ಅಭಿನಯಕ್ಕೂ ಅವರು ಸೈ ಎನಿಸಿಕೊಂಡಿದ್ದರು. ಚಿತ್ರರಂಗದ ದಿಗ್ಗಜರ ಜೊತೆ ತೆರೆ ಹಂಚಿಕೊಂಡಿದ್ದರು. ಮೋಹನ್ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಅಂತ್ಯಕ್ರಿಯೆ ಶನಿವಾರ ಚಿಕ್ಕಬಾಣಾವರದ ತಮ್ಮೇನಹಳ್ಳಿ ರುದ್ರಭೂಮಿಯಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.