ಬೆಂಗಳೂರು: ಜೆ.ಪಿ. ನಗರದ 7ನೇ ಹಂತದಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಅವರ ಮೆದುಳು ನಿಷ್ಕ್ರಿಯವಾಗಿದ್ದು, ಬದುಕುವುದು ಕಷ್ಟವೆಂದು ವೈದ್ಯರು ಹೇಳಿದ್ದಾರೆ.

ಸ್ನೇಹಿತ ನವೀನ್ ಜೊತೆ ಶನಿವಾರ ರಾತ್ರಿ ಬೈಕ್ನಲ್ಲಿ ಹೊರಟಿದ್ದಾಗ ಅಪಘಾತ ಸಂಭವಿಸಿತ್ತು. ಮೆದುಳಿನ ಎರಡೂ ಭಾಗಕ್ಕೆ ಹೊಡೆತ ಬಿದ್ದು, ರಕ್ತ ಹೆಪ್ಪುಗಟ್ಟಿತ್ತು.

ಓದಿ:ಕೋಮಾದಲ್ಲಿ ಸಂಚಾರಿ ವಿಜಯ್, ಆರೋಗ್ಯ ಸ್ಥಿತಿ ಗಂಭೀರ

ಭಾನುವಾರ ಬೆಳಿಗ್ಗೆಯೇ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದ ಅಪೋಲೊ ಆಸ್ಪತ್ರೆ ವೈದ್ಯರು, ವಿಜಯ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದರು. ಆದರೆ, ಇದುವರೆಗೂ ವಿಜಯ್ ಅವರಿಗೆ ಪ್ರಜ್ಞೆ ಬಂದಿಲ್ಲ.

ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾತನಾಡಿದ ಅಪೋಲೊ ಆಸ್ಪತ್ರೆ ವೈದ್ಯ ಅರುಣ್, 'ಶಸ್ತ್ರಚಿಕಿತ್ಸೆ ಬಳಿಕವೂ ವಿಜಯ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಸದ್ಯಕ್ಕೆ ಹೆಚ್ಚು ಮಾಹಿತಿ ನೀಡಲಾಗದು' ಎಂದರು.

ಓದಿ:ಸಂಚಾರಿ ವಿಜಯ್ ಚಿಕಿತ್ಸಾ ವೆಚ್ಚ ಭರಿಸಲು ಮುಂದೆ ಬಂದಡಿಸಿಎಂ ಅಶ್ವತ್ಥನಾರಾಯಣ

ವಿಜಯ್ ತಮ್ಮ ಸಿದ್ದೇಶ್ ಕುಮಾರ್, ‘ಅಣ್ಣ ಬದುಕುವುದು ಕಷ್ಟವೆಂದು ವೈದ್ಯರು ಹೇಳುತ್ತಿದ್ದಾರೆ’ ಎಂದು ಕಣ್ಣೀರಿಟ್ಟರು.

‘ಮೆದುಳು ನಿಷ್ಕ್ರಿಯವಾಗಿದೆ ಎಂದೂ ವೈದ್ಯರು ತಿಳಿಸಿದ್ದಾರೆ. ಆ ರೀತಿಯಾದರೆ, ಅಣ್ಣನ ಅಂಗಾಂಗ ದಾನ ಮಾಡಲು ತೀರ್ಮಾನಿಸಿದ್ದೇವೆ’ ಎಂದೂ ತಿಳಿಸಿದರು.

ನಟ ನೀನಾಸಂ ಸತೀಶ್, ‘ಚಿಕಿತ್ಸೆಗೆ ವಿಜಯ್ ಸ್ಪಂದಿಸುತ್ತಿಲ್ಲವೆಂದು ವೈದ್ಯರು ಹೇಳಿದ್ದಾರೆ. ನನ್ನ ಅಣ್ಣನಿಗೂ ಇದೇ ರೀತಿ ಆಗಿತ್ತು. ಆತ ಕೆಲ ದಿನ ಬಿಟ್ಟು ಹುಷಾರಾಗಿದ್ದ. ವಿಜಯ್ ಸಹ ಹುಷಾರಾಗಿ ಬರಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.