ಐಟಿ ಕ್ಷೇತ್ರದವರು ಸಿನಿಮಾರಂಗದತ್ತ ಆಕರ್ಷಿತರಾಗಿ ಬರುವುದು ಹೊಸತೇನಲ್ಲ. ಹಾಗೆಯೇ ಐಟಿ ಕ್ಷೇತ್ರದಲ್ಲಿನ ಒಂದಷ್ಟು ಮನಸುಗಳು ಒಟ್ಟಾಗಿ ನಿರ್ಮಿಸುತ್ತಿರುವ ‘ನವ ದಿಗಂತ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಐಟಿ ಕಂಪೆನಿಯೊಂದರಲ್ಲಿ ವ್ಯವಸ್ಥಾಪಕರಾಗಿರುವ ದುರ್ಗಾ ಮೋಹನ್ ಅವರು ಚಿನ್ಮಯ ಸಿನಿ ಕ್ರಿಯೇಶನ್ಸ್ ಮೂಲಕ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

‘ಪ್ರತಿಯೊಬ್ಬರಿಗೂ ಪ್ರತಿಭೆ ಎಂಬುದು ಹುಟ್ಟಿನಿಂದಲೇ ಬಂದಿರುತ್ತದೆ. ಆದರೆ ಅದನ್ನು ಮರೆತು ಜೀವನಕ್ಕೋಸ್ಕರ ಬೇರೆ ಉದ್ಯೋಗ ಮಾಡುತ್ತಿರುತ್ತೇವೆ. ನಿಜವಾದ ಸಂತೋಷ ಸಿಗುವುದು ಕಲೆಯಿಂದ ಎಂದು ತಿಳಿಯದೆ ಜೀವನ ಸಾಗಿಸುತ್ತಿರುತ್ತೇವೆ. ಸಂಗೀತ, ನೃತ್ಯ, ಕ್ರೀಡೆ, ಬರವಣಿಗೆ ಏನೇ ತೆಗೆದುಕೊಂಡರೂ ಅದು ಕಲೆಯಾಗಿರುತ್ತದೆ, ಹೊರತು ಬೇರೇನೂ ಆಗಿರುವುದಿಲ್ಲ. ಕಲೆಗೆ ಸಾವಿಲ್ಲ ಎಂಬುದನ್ನು ಈ ಚಿತ್ರ ಹೇಳುತ್ತದೆ. ಪೋಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಒಂದು ಒಳ್ಳೆಯ ಸಂದೇಶ ಕೊಡಲಿದೆ’ ಎಂದರು ನಿರ್ದೇಶಕಿ.

ಮೇಘನಾ, ಚೇತನ್, ರೋಷನ್, ಅಭಿಜಿತ್ ಮೊದಲಾದ ಹೊಸ ಕಲಾವಿದರು ಚಿತ್ರದಲ್ಲಿದ್ದಾರೆ. ನಾಲ್ಕು ಹಾಡುಗಳಿಗೆ ಶರತ್-ಪ್ರಫುಲ್ಲಾ ಸಂಗೀತ, ಪ್ರಜ್ವಲ್ ವಿನೋದ್ ಛಾಯಾಚಿತ್ರಗ್ರಹಣವಿದೆ. ಬೆಂಗಳೂರು ಸುತ್ತಮುತ್ತ 30 ದಿನಗಳ ಕಾಲ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.