ಬೆಂಗಳೂರು: ‘ಸಪ್ತ ಸಾಗರದಾಚೆ ಎಲ್ಲೋ– ಸೈಡ್–B’ ಚಿತ್ರ ಅಕ್ಟೋಬರ್ 27ರಂದು ಬಿಡುಗಡೆಯಾಗಲಿದೆ ಎಂದು ನಟ ರಕ್ಷಿತ್ ಶೆಟ್ಟಿ ಖಚಿತಪಡಿಸಿದ್ದಾರೆ.

ಸೆ.1ರಂದು ಬಿಡುಗಡೆಯಾಗಿದ್ದ ‘ಸಪ್ತ ಸಾಗರದಾಚೆ ಎಲ್ಲೋ– ಸೈಡ್–A’ ಚಿತ್ರ ಯಶಸ್ಸು ಕಂಡ ಬೆನ್ನಲ್ಲೇ ‘ಸೈಡ್–B’ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ಚಿತ್ರ ಬಿಡುಗಡೆ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಮ್ಮ ಪ್ರಯಾಣದಲ್ಲಿ ಸ್ವಲ್ಪ ಅಡ್ಡದಾರಿ, ಆದರೆ, ಗಮ್ಯಸ್ಥಾನವು ಒಂದೇ ಆಗಿರುತ್ತದೆ! ‘ಸಪ್ತ ಸಾಗರದಾಚೆ ಎಲ್ಲೋ– ಸೈಡ್–B’ ಅಕ್ಟೋಬರ್ 27ರಂದು ತೆರೆಕಾಣಲಿದೆ. ಚಿತ್ರದ ಮುಂದುವರಿದ ಭಾಗವನ್ನು ಅಷ್ಟೇ ಪ್ರೀತಿ ಮತ್ತು ಬೆಂಬಲದೊಂದಿಗೆ ಸ್ವೀಕರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

ಪರಂವಃ ಪಿಕ್ಚರ್ಸ್ ನಿರ್ಮಾಣದ ‘ಸಪ್ತ ಸಾಗರದಾಚೆ ಎಲ್ಲೋ– ಸೈಡ್–A’ನಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ರಮೇಶ್ ಇಂದಿರಾ, ಪವಿತ್ರಾ ಲೋಕೇಶ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್ ಮುಂತಾದವರು ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ದಾವಣಗರೆಯಲ್ಲಿ ಗುರುವಾರ ಮಾತನಾಡಿದ್ದ ರಕ್ಷಿತ್ ಶೆಟ್ಟಿ, ‘ಎಲ್ಲರಿಗೂ ಸಿನಿಮಾ ಇಷ್ಟವಾಗಿದೆ ಅಲ್ವಾ? ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ ಪ್ರೋತ್ಸಾಹಿಸಿ, ನಿಮ್ಮ ಮುಖದ ಮೇಲಿನ ಮಂದಹಾಸ ನೋಡಿದಾಗ ನಮ್ಮ ಎರಡೂವರೆ ವರ್ಷದ ಶ್ರಮಕ್ಕೆ ಪ್ರತಿಫಲ ಸಿಕ್ಕಂತೆ ಆಯಿತು’ ಎಂದು ಸಂತಸ ವ್ಯಕ್ತಪಡಿಸಿದ್ದರು.
.'ಸಪ್ತ ಸಾಗರದಾಚೆ ಎಲ್ಲೋ' ವಿಮರ್ಶೆ: ಪ್ರಕ್ಷುಬ್ಧ ಗಮ್ಯದತ್ತ ನಿಶ್ಶಬ್ದ ನದಿಯ ಪಯಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.