‘ರಾನಿ’ ಬಳಿಕ ಕಿರಣ್ರಾಜ್ ನಟನೆಯ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಚರಣ್ ನಿರ್ದೇಶನದ, ಕಿರಣ್ರಾಜ್ ಹಾಗೂ ಕಾಜಲ್ ಕುಂದರ್ ಜೋಡಿ ನಟಿಸಿರುವ ‘ಮೇಘ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

‘ಮೇಘ’ ಕೃಷಿ ಪ್ರೊಡಕ್ಷನ್ಸ್ ಬ್ಯಾನರ್ನ ಚೊಚ್ಚಲ ಚಿತ್ರವಾಗಿದ್ದು, ನಾಯಕನ ತಂದೆಯಾಗಿ ರಾಜೇಶ್ ನಟರಂಗ ನಟಿಸಿದ್ದಾರೆ. ಶೋಭರಾಜ್, ಸಂಗೀತಾ, ಸುಂದರ್ ವೀಣಾ, ಹನುಮಂತೇಗೌಡ, ತರಂಗ ವಿಶ್ವ ಮತ್ತು ಗಿರೀಶ್ ಶಿವಣ್ಣ ಮುಂತಾದ ಕಲಾವಿದರು ತಾರಾಬಳಗದಲ್ಲಿದ್ದಾರೆ. ‘ಚಿತ್ರದ ಕಥೆಯು ನಿಜವಾದ ಸ್ನೇಹ ಮತ್ತು ಪ್ರೀತಿಯ ನಡುವೆ ಇರುವ ಸಣ್ಣ ವ್ಯತ್ಯಾಸವನ್ನು ನಿರೂಪಿಸುತ್ತದೆ. ಮಾನವ ಭಾವನೆಗಳ ಸಿನಿಮೀಯ ಚಿತ್ರಣವನ್ನು ಚಿತ್ರಿಸುತ್ತದೆ. ಇದು ವಿವಿಧ ಸಂಬಂಧಗಳ ಮೌಲ್ಯಗಳನ್ನು ವಿವರಿಸುವ ನಿಟ್ಟಿನಲ್ಲಿ ರೂಪಕಗೊಂಡ ಕಥೆ’ ಎಂದಿದೆ ಚಿತ್ರತಂಡ.

ವಿ.ನಾಗೇಂದ್ರ ಪ್ರಸಾದ್ ಅವರ ಎರಡು ಹಾಡುಗಳು, ನಿರ್ದೇಶಕ ಚರಣ್ ಅವರ ಮೂರು ಹಾಡುಗಳು ಚಿತ್ರದಲ್ಲಿದ್ದು, ಜೋಯಲ್ ಸಕ್ಕರಿ ಅವರು ಸಂಗೀತ ಸಂಯೋಜಿಸಿದ್ದಾರೆ. ವಿಜಯ್ ಪ್ರಕಾಶ್ ಮತ್ತು ವಾಸುಕಿ ವೈಭವ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.