ಬೆಂಗಳೂರು: ನಟ ಆಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಸಿನಿಮಾಕ್ಕೆ ಇಂಟರ್‌ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ) ಕಂಪನಿಯ ವೆಬ್‌ಸೈಟ್‌ನಲ್ಲಿ ಪ್ರಸ್ತುತ ಕೇವಲ 4.5/10 ರೇಟಿಂಗ್ ದೊರೆತಿದೆ.

ಇದನ್ನೂ ಓದಿ:ಲಾಲ್ ಸಿಂಗ್ ಚಡ್ಡಾ ಸಿನಿಮಾ ವಿಮರ್ಶೆ: ದೊಡ್ಡ ಕಾಲಕ್ಷೇಪ, ಮನುಷ್ಯತ್ವದ ಓಟ

ಬಹುನಿರೀಕ್ಷಿತ ಮತ್ತು ಅಷ್ಟೇ ವಿವಾದಿತ ಚಿತ್ರಕ್ಕೆ 55,000ಕ್ಕೂ ಹೆಚ್ಚು ಮಂದಿ ‘ಒಂದು-ಸ್ಟಾರ್’ ರೇಟಿಂಗ್ ನೀಡಿದ್ದಾರೆ.

ಶುಕ್ರವಾರ ರಾತ್ರಿ 8:25 ರ ಹೊತ್ತಿಗೆ, 89,577 ಐಎಂಡಿಬಿ ಬಳಕೆದಾರರು ಚಲನಚಿತ್ರಕ್ಕೆ ರೇಟಿಂಗ್ ನೀಡಿದ್ದರು. ಇದರಲ್ಲಿ 55,819 (62.3%) ಮಂದಿ ‘ಒಂದು ಸ್ಟಾರ್’ ನೀಡಿದ್ದಾರೆ.

21,063 ಬಳಕೆದಾರರು 10/10 ನೀಡಿದರೆ, 6,102 ಜನರು 9/10 ಮತ್ತು 3,111 ಬಳಕೆದಾರರು 8/10 ನೀಡಿದ್ದಾರೆ.

‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ನಿರ್ಮಾಣ ಘೋಷಣೆಯಾದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಒಳಗಾಗುತ್ತಲೇ ಬಂದಿದೆ. ಸಿನಿಮಾವನ್ನು ಬಹಿಷ್ಕರಿಸುವಂತೆ ಬಿಡುಗಡೆಗೂ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆದಿತ್ತು. ಅಭಿಯಾನಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದ ಆಮೀರ್ ಖಾನ್ ‘ದಯವಿಟ್ಟು ಸಿನಿಮಾ ನೋಡಿ’ ಎಂದು ಪ್ರೇಕ್ಷಕರನ್ನು ವಿನಂತಿಸಿದ್ದರು. ಚಿತ್ರ ಬಿಡುಗಡೆಯ ನಂತರವೂ ಅದರ ಸುತ್ತ ಪರ, ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ.

ಇನ್ನೊಂದಡೆ ‘ಲಾಲ್ ಸಿಂಗ್ ಚಡ್ಡಾ‘ ಚಲನಚಿತ್ರದ ವಿರುದ್ಧ ಹಿಂದೂ ಸಂಘಟನೆಯ ಸದಸ್ಯರು ಗುರುವಾರ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದರು. ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಆಮೀರ್ ಖಾನ್ ಗೇಲಿ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಉತ್ತರ ಪ್ರದೇಶದಲ್ಲಿ ಅದನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.

ಹೀಗಿರುವಾಗಲೇ ಐಎಂಡಿಬಿಯಲ್ಲಿ ಸಿಕ್ಕಿರುವ ಅಂಕಗಳು ಸಿನಿಮಾಕ್ಕೆ ಹಿನ್ನಡೆಯುಂಟುಮಾಡಿದೆ.

ಇವುಗಳನ್ನೂ ಓದಿ

ಲಾಲ್ ಸಿಂಗ್ ಚಡ್ಡಾ Twitter Review: ಅಮೀರ್ ನಟನೆಗೆ ಬಹುಪರಾಕ್ ಎಂದ ಪ್ರೇಕ್ಷಕರು

ದಯವಿಟ್ಟು ನನ್ನ ಚಿತ್ರ ನೋಡಿ: 'ಲಾಲ್ ಸಿಂಗ್ ಚಡ್ಡಾ’ ಬಹಿಷ್ಕಾರಕ್ಕೆ ಅಮೀರ್ ಅಳಲು

ಉತ್ತರ ಪ್ರದೇಶದಲ್ಲಿ ‘ಲಾಲ್ ಸಿಂಗ್ ಚಡ್ಡಾ’ ನಿಷೇಧಕ್ಕೆ ಹಿಂದೂ ಸಂಘಟನೆ ಆಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.