‘ಪಾತ್ರಕ್ಕಾಗಿ ಪಲ್ಲಂಗ’ (ಕ್ಯಾಸ್ಟಿಂಗ್ ಕೌಚ್) ಆರೋಪಗಳಿಗೆ ನಾನು ಮಹತ್ವವನ್ನು ಕೊಡುವುದಿಲ್ಲ. ಅದರ ಬಗ್ಗೆ ನನಗೆ ಮಾತನಾಡಲಿಕ್ಕೆ ಇಷ್ಟವಿಲ್ಲ’ ಹೀಗೆ ಕಡ್ಡಿ ಮುರಿದಂತೆ ಹೇಳಿದರು ನಟಿ ಲಕ್ಷ್ಮಿ ರೈ. ತುಸು ತಡೆದು ಮತ್ತೆ ಮುರಿದ ಕಡ್ಡಿಯನ್ನು ಜೋಡಿಸುವಂತೆ ಅದೇ ವಿಷಯದ ಕುರಿತು ಮಾತನಾಡಲು ಶುರುಮಾಡಿದರು. ಕ್ಯಾಸ್ಟಿಂಗ್ ಕೌಚ್ ಎಂಬ ಶಬ್ದದ ಕುರಿತೇ ಅವರಿಗೆ ಸಿಕ್ಕಾಪಟ್ಟೆ ಸಿಟ್ಟಿದ್ದಂತಿತ್ತು.

ಈ ವಿಷಯ ಮುನ್ನೆಲೆಗೆ ಬರುವುದಕ್ಕೂ ಮುನ್ನ ‘ನಾನು ನೇರ ಸ್ವಭಾವದವಳು. ನನಗೆ ಕಂಫರ್ಟ್ ಇಲ್ಲದ ಜಾಗದಲ್ಲಿ ನಾನು ಕೆಲಸ ಮಾಡಲಾರೆ. ಯಾರ ಮುಲಾಜೂ ಇಲ್ಲ ನನಗೆ. ನನಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತೇನೆ. ಹಾಗಾಗಿಯೇ ಕೆಲವು ವಿವಾದಗಳಲ್ಲಿ ಸಿಲುಕಿಕೊಂಡಿದ್ದೇನೆ. ಆದರೆ ಅವಕ್ಕೆಲ್ಲ ನಾನು ಕೇರ್ ಮಾಡಲಾರೆ’ ಎಂಬ ಅವರ ಮಾತುಗಳನ್ನು ಪುಷ್ಟೀಕರಿಸುವ ಹಾಗೆಯೇ ಅವರು ಮತ್ತೆ ಮಾತಿಗೆ ತೊಡಗಿದರು.

‘ಪಾತ್ರಕ್ಕಾಗಿ ಪಲ್ಲಂಗ ಎಂಬ ಆ ಶಬ್ದವೇ ತುಂಬ ಫೇಮಸ್ ಆಗಿಬಿಟ್ಟಿದೆ. ಎಲ್ಲರೂ ಅದರ ಕುರಿತೇ ಕೇಳುತ್ತಿದ್ದಾರೆ. ಆದರೆ ಪರಿಸ್ಥಿತಿ ಇಲ್ಲವೇ ಇಲ್ಲ. ಅದಕ್ಕೂ ಚಿತ್ರರಂಗಕ್ಕೂ ಯಾವ ಸಂಬಂಧವೂ ಇಲ್ಲ. ನನ್ನ ಬದುಕಿನಲ್ಲಿ ಅಂಥ ಯಾವ ಅನುಭವವೂ ಆಗಿಲ್ಲ. ಬೇರೆಯವರ ಅನುಭವ ಬೇರೆ ಥರ ಇರಬಹುದು. ನಾನು ಇದರ ಬಗ್ಗೆ ಮಾತಾಡಿ ಅದರ ಮೂಲಕ ಜನಪ್ರಿಯತೆ ತೆಗೆದುಕೊಳ್ಳಲಿಕ್ಕೆ ನನಗೆ ಇಷ್ಟವಿಲ್ಲ. ನನಗೆ ಅಂಥ ಅನುಭವ ಆಗಿಲ್ಲ ಎಂದ ಮೇಲೆ ಅದರ ಬಗ್ಗೆ ಯಾಕೆ ಮಾತಾಡಬೇಕು ಹೇಳಿ? ಪಾತ್ರಕ್ಕಾಗಿ ಪಲ್ಲಂಗ ಸಮಸ್ಯೆಯ ಕುರಿತು ಮಾತನಾಡಿ ಪಬ್ಲಿಸಿಟಿ ತೆಗೆದುಕೊಳ್ಳುವುದು ನನಗೆ ಬೇಕಿಲ್ಲ’ ಎಂದ ಅವರು, ಇನ್ನೇನು ಆ ಕುರಿತು ಮಾತು ಮುಗಿಸುತ್ತಾರೆ ಎಂದುಕೊಳ್ಳುತ್ತಿದ್ದಂತೆಯೇ ಇನ್ನಷ್ಟು ಮುಂದುವರಿದರು.

‘ಇಷ್ಟೊಂದು ಜನ ಪಾತ್ರಕ್ಕಾಗಿ ಪಲ್ಲಂಗ ಸಮಸ್ಯೆಯ ಕುರಿತು ಮಾತನಾಡುತ್ತಿರುವುದು ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕೋಸ್ಕರ’ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ. ‘ನೀವು ಆ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮಾತನಾಡಿ ಏನು ಪ್ರಯೋಜನ? ಮಾತಾಡಿದರೆ ಪರಿಹಾರ ಆಗುತ್ತದೆಯೇ? ಸುಮ್ಮನೆ ಸುದ್ದಿಯಾಗಬೇಕು ಎಂದು ಮಾತನಾಡಬೇಡಿ’ ಎಂದು ಖಡಕ್ ಆಗಿ ಹೇಳುತ್ತಾರೆ ಲಕ್ಷ್ಮಿ.

‘ಈ ಚಿತ್ರರಂಗದಲ್ಲಿ ಎಷ್ಟೊಂದು ಒಳ್ಳೆಯ ವ್ಯಕ್ತಿಗಳಿದ್ದಾರೆ. ಒಳ್ಳೆಯ ಸುದ್ದಿಗಳನ್ನು ಯಾರೂ ಹೇಳುವುದಿಲ್ಲ. ಸಾವಿರ ಜನರಲ್ಲಿ ಒಬ್ಬರು ಯಾರಾದರೂ ಕೆಟ್ಟ ಕೆಲಸ ಮಾಡಿದರೆ ಉಳಿದ ಒಂಬೈನೂರ ತೊಂಬತ್ತೊಂಬತ್ತು ಜನರೂ ಅದೇ ಥರ ಎಂದು ತಿಳಿದುಕೊಳ್ಳುವಂತಾಗುತ್ತಿದೆ. ಇದು ಬೇಸರದ ಸಂಗತಿ’ ಎಂದು ತುಸು ಸುಮ್ಮನಾದರು.

ಮಾತು ಈಗ ಮಹಿಳಾ ಪ್ರಧಾನ ಚಿತ್ರಗಳ ಕಡೆಗೆ ತಿರುಗಿತು. ಲಕ್ಷ್ಮಿ ಈಗ ‘ಜಾನ್ಸಿ’ ಎಂಬ ನಾಯಕಿಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘‘ನಾಯಕಿಪ್ರಧಾನ ಚಿತ್ರಗಳಿಗೆ ಮಾರುಕಟ್ಟೆ ನಿಧಾನಕ್ಕೆ ತೆರೆದುಕೊಳ್ಳುತ್ತದೆ. ಇದು ಸ್ಟಾರ್ ನಟ ಮತ್ತು ನಟಿಯರ ನಡುವಿನ ಸಂಭಾವನೆಯ ತಾರತಮ್ಯವನ್ನೂ ಕಡಿಮೆ ಮಾಡುತ್ತದೆ’’ ಎನ್ನುವುದು ಅವರ ಅನಿಸಿಕೆ.

‘ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸುವುದು ಒಂದು ರೀತಿಯಲ್ಲಿ ಅನುಕೂಲ ಇನ್ನೊಂದು ರೀತಿಯಲ್ಲಿ ರಿಸ್ಕ್. ಅನುಕೂಲ ಏನೆಂದರೆ ನಟನೆಗೆ ಒಳ್ಳೆಯ ಅವಕಾಶ ಇರುತ್ತದೆ. ನಮ್ಮ ಪ್ರತಿಭೆಯನ್ನು ಸಾಬೀತುಗೊಳಿಸುವುದಕ್ಕೆ ಸಾಧ್ಯವಾಗುತ್ತದೆ. ಇಂಥ ಸಿನಿಮಾಗಳಲ್ಲಿ ಸಿಗುವ ತೃಪ್ತಿ, ಸಂತೋಷವೇ ಬೇರೆ. ನಮ್ಮ ಪಾತ್ರಕ್ಕೆ ಘನತೆ ಇರುತ್ತದೆ.ಹಾಗೆಯೇ ನಟಿಯೊಬ್ಬಳು ತಾನೇ ಪ್ರಧಾನವಾಗಿರುವ ಚಿತ್ರದಲ್ಲಿ ನಟಿಸಿದರೆ ಸಿಗುವ ಸಂಭಾವನೆಯೂ ಹೆಚ್ಚು. ನಟನಿಗೆ ಸಮನಾದ ಸಂಭಾವನೆ ಪಡೆಯಲು ಸಾಧ್ಯವಿಲ್ಲದಿದ್ದರೂ ತಾನು ಮಾಮೂಲಿಯಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆಯ ಎರಡು ಮೂರು ಪಟ್ಟು ಸಂಭಾವನೆಯನ್ನು ನಾಯಕಿ ಪ್ರಧಾನ ಚಿತ್ರಗಳಲ್ಲಿ ಪಡೆದುಕೊಳ್ಳಬಹುದು’ ಎನ್ನುವ ಅವರು, ಇದರ ಜತೆಗೇ ಇರುವ ಸವಾಲುಗಳ ಕುರಿತೂ ಗಮನ ಸೆಳೆಯುತ್ತಾರೆ.

‘ಇಡೀ ಸಿನಿಮಾ ನಮ್ಮ ಹೆಗಲ ಮೇಲೆಯೇ ಇರುತ್ತದೆ. ಅದು ರಿಸ್ಕ್. ಅದಕ್ಕಾಗಿ ಸರಿಯಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಜಾನ್ಸಿ ಪಕ್ಕಾ ಆ್ಯಕ್ಷನ್ . ಹೆಣ್ಣುಮಗಳೊಬ್ಬಳು ಸರಿಯಾದ ಸಿದ್ಧತೆ ಇಲ್ಲದೆ ಮಾಡಿದರೆ ಆ್ಯಕ್ಷನ್ ಎನ್ನುವುದು ಕಾಮಿಡಿ ಆಗಿಬಿಡುತ್ತದೆ. ಹಾಗಾಗಿ ಅದಕ್ಕೆ ತಗುಲುವ ಸಮಯವೂ ಹೆಚ್ಚು. ಹೀರೊಯಿಸಂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವುದಾದರೆ ವರ್ಷಕ್ಕೆ ಐದಾರು ಚಿತ್ರಗಳಲ್ಲಿ ನಟಿಸಿಬಿಡಬಹುದು. ಆದರೆ ನಾಯಕಿ ಪ್ರಧಾನ ಚಿತ್ರಗಳನ್ನು ಬಹು ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕಾಗುತ್ತದೆ. ವರ್ಷಕ್ಕೆ ಹೆಚ್ಚೆಂದರೆ ಎರಡು ಸಿನಿಮಾ ಮಾಡಬಹುದು ಅಷ್ಟೆ’ ಎನ್ನುವುದು ಅವರ ವಿವರಣೆ.

ಈಗ ನಟಿಸುತ್ತಿರುವ ‘ಜಾನ್ಸಿ’ ಸಿನಿಮಾ ತಮಗೆ ಯಶಸ್ಸನ್ನು ತಂದುಕೊಡಬಲ್ಲದು ಎಂಬ ನಂಬಿಕೆಯೂ ಅವರಿಗಿದೆ. ಇದುವರೆಗೆ ಮಾಡಿರದ ಹೊಸ ಬಗೆಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರಂತೆ. ‘ಇದು ನನ್ನ ಮೊದಲ ಆ್ಯಕ್ಷನ್ ಸಿನಿಮಾ. ಕಥೆ ತುಂ ಚೆನ್ನಾಗಿ ಇದ್ದುದರಿಂದಲೇ ಬೇರೆ ಎಲ್ಲ ಅವಕಾಶಗಳನ್ನು ಬಿಟ್ಟು ಈ ಸಿನಿಮಾ ಒಪ್ಪಿಕೊಂಡೆ. ಈ ಚಿತ್ರದಲ್ಲಿ ಸಸ್ಪೆನ್ಸ್, ಆ್ಯಕ್ಷನ್ ಜತೆಗೆ ಒಂದು ಸಣ್ಣ ಪ್ರೇಮಕಥನದ ಎಳೆಯೂ ಇದೆ’ ಎಂದು ಅವರು ಚಿತ್ರದ ಕುರಿತು ಹೇಳುತ್ತಾರೆ.

2012ರಲ್ಲಿ ಬಿಡುಗಡೆಯಾಗಿದ್ದ ‘ಕಲ್ಪನಾ’ ಚಿತ್ರವೇ ಅವರು ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ. ಈ ಆರು ವರ್ಷಗಳ ಅಂತರದ ಬಗ್ಗೆ ಕೇಳಿದರೆ ಅವರು ‘ತಮ್ಮ ಬ್ಯುಸಿ ಶೆಡ್ಯೂಲ್ ಕಾರಣ’ ಎನ್ನುತ್ತಾರೆ. ಕೆಜಿಎಫ್, ಕುರುಕ್ಷೇತ್ರ ಸಿನಿಮಾಗಳಲ್ಲಿ ನಟನೆಗೆ ನನಗೆ ಅವಕಾಶ ಬಂದಿತ್ತು. ಆದರೆ ನಾನು ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೆ. ಡೇಟ್ಸ್ ಹೊಂದಾಣಿಕೆ ಆಗುತ್ತಿರಲಿಲ್ಲ. ಅಲ್ಲದೆ ಕನ್ನಡ ಚಿತ್ರರಂಗದ ಮೇಲೆ ನನಗೆ ವಿಶೇಷ ಪ್ರೀತಿ ಇದೆ. ಹಾಗಾಗಿಯೇ ನಾನು ಈ ಭಾಷೆಯಲ್ಲಿ ವಿಶೇಷ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತ ಬಂದಿದ್ದೇನೆ. ಈಗ ನಟಿಸುತ್ತಿರುವ ಚಿತ್ರವೂ ವಿಶೇಷವಾಗಿದದ್ದು’ ಎನ್ನುತ್ತಾರೆ.

‘ಈ ಚಿತ್ರದ ಪಾತ್ರಕ್ಕೂ ಅವರ ನಿಜಜೀವನದ ಗುಣ ಸ್ವಭಾವಕ್ಕೂ ಸಾಕಷ್ಟು ಸಾಮ್ಯತೆ ಇದೆಯಂತೆ. ಹಾಗಾಗಿಯೇ ಈ ಪಾತ್ರದಲ್ಲಿ ನಟಿಸುತ್ತಿರುವುದು ನನಗೆ ಖುಷಿ ತಂದಿದೆ’ ಎಂದರು. ‘ಇನ್ನು ಮುಂದೆಯೂ ಮಹಿಳಾ ಪ್ರಧಾನ ಚಿತ್ರಗಳಿಗೆ ಪ್ರಾಶಸ್ತ್ಯ ಕೊಡುತ್ತೇನೆ’ ಎನ್ನುವ ಅವರು ‘ಹಾಗೆಂದು ನಾಯಕಿಯಾಗಿ ನಟಿಸುವುದಿಲ್ಲ ಎಂದಲ್ಲ. ಒಳ್ಳೆಯ ಅವಕಾಶ ಸಿಕ್ಕರೆ ಯಾವ ರೀತಿಯ ಪಾತ್ರದಲ್ಲಿಯೂ ನಟಿಸಲು ಸಿದ್ಧ’ ಎನ್ನಲು ಅವರು ಮರೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.