ನೀನಾಸಂ ಸತೀಶ್ ಹಾಗೂ ನಿರ್ದೇಶಕ ಪವನ್ ಕುಮಾರ್ ಅವರ ಸಿನಿ ಜರ್ನಿಗೆ ದೊಡ್ಡ ತಿರುವು ನೀಡಿದ ಸಿನಿಮಾ ‘ಲೂಸಿಯಾ’. ಈ ಸಿನಿಮಾ ಬಿಡುಗಡೆಯಾಗಿ 10 ವರ್ಷ ಕಳೆದಿದ್ದು, ಈ ಸಂದರ್ಭದಲ್ಲೇ ಸಿನಿಮಾವನ್ನು ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಸೆ.6ರಂದು ಸಿನಿಮಾ ಮರು ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಪವನ್ ತಿಳಿಸಿದ್ದಾರೆ. 10ನೇ ವರ್ಷದ ಸಂಭ್ರಮವನ್ನು ಪವನ್, ಸತೀಶ್ ಹಾಗೂ ನಟಿ ಶ್ರುತಿ ಹರಿಹರನ್ ಅವರು ಶುಕ್ರವಾರ(ಸೆ.1) ಜೊತೆಯಾಗಿ ಆಚರಿಸಿದರು. ‘ಸಿನಿಮಾ ಕೇವಲ ಮಲ್ಟಿಪ್ಲೆಕ್ಸ್ಗಳಲ್ಲಿ ಮರು ಬಿಡುಗಡೆ ಆಗಲಿದ್ದು, ರಾಜ್ಯದಾದ್ಯಂತ ಸುಮಾರು 12–15 ಪರದೆಗಳಲ್ಲಿ ಪ್ರದರ್ಶನವಿರಲಿದೆ. ಅಭಿಮಾನಿಗಳಿಗೆ ಮತ್ತೊಮ್ಮೆ ಈ ಸಿನಿಮಾವನ್ನು ನೋಡುವ ಅವಕಾಶವಿದು. ಬೇಡಿಕೆ ಬಂದರೆ ಏಕಪರದೆ ಚಿತ್ರಮಂದಿರಗಳಲ್ಲೂ ಸಿನಿಮಾ ರಿರಿಲೀಸ್ ಮಾಡಲಿದ್ದೇವೆ. ಇದು ವಿತರಕರಿಗೆ ಬಿಟ್ಟಿದ್ದು. ಕಳೆದ 10 ವರ್ಷದಲ್ಲಿ ಹಲವು ಬದಲಾವಣೆಗಳಾಗಿವೆ. ನಮ್ಮ ವೈಯಕ್ತಿಕ ಬದುಕು, ಸಿನಿಮಾ ಬದುಕಿನ ಗ್ರಾಫ್ನಲ್ಲಿ ಏರಿಳಿತಗಳೂ ಆಗಿವೆ’ ಎಂದು ನೆನಪಿಸಿಕೊಳ್ಳುತ್ತಾರೆ ಪವನ್.

‘10 ವರ್ಷ ಕಳೆದರೂ, ಇಂದಿಗೂ ನನ್ನನ್ನು ‘ಲೂಸಿಯಾ’ ಸಿನಿಮಾದಿಂದಲೇ ಗುರುತಿಸುವಾಗ ಖುಷಿ ಆಗುತ್ತದೆ. ಅಂದು ಆ ಸಿನಿಮಾ ರಿಲೀಸ್ ಮಾಡಿದರೆ ಸಾಕು ಎನ್ನುವಂತಹ ಸ್ಥಿತಿ ಇತ್ತು. ಇಂದು ರಿರಿಲೀಸ್! ಇದನ್ನು ಅಂದು ಊಹಿಸಿಯೂ ಇರಲಿಲ್ಲ’ ಎನ್ನುತ್ತಾರೆ ಪವನ್. ಚಿತ್ರವನ್ನು ಕೆಆರ್ಜಿ ಸ್ಟುಡಿಯೋಸ್ ವಿತರಣೆ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.