ಮುಂಬೈ: ಕಿರಿಯ ಪುರುಷನೊಂದಿಗೆ ಡೇಟಿಂಗ್ ಮಾಡುವ ಮಹಿಳೆಯನ್ನು ‘ಅಪರಾಧಿ’ ಎಂಬುದಾಗಿ ಪರಿಗಣಿಸಲಾಗುತ್ತಿದೆ ಎಂದು ಬಾಲಿವುಡ್ ನಟಿ ಮಲೈಕಾ ಅರೋರಾ ತಿಳಿಸಿದ್ದಾರೆ.

ಈ ವಿಚಾರವಾಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ‘ಡಿವೋರ್ಸ್ ಅಥವಾ ಬ್ರೇಕ್ ಅಪ್ ಆದ ನಂತರ ಮಹಿಳೆಯೂ ಬದುಕಬೇಕಿದೆ. ಆದರೆ, ಕಿರಿಯ ಪುರುಷನೊಂದಿಗೆ ಡೇಟಿಂಗ್ ಮಾಡುವ ಮಹಿಳೆಯನ್ನು ಅಪರಾಧಿ ಎಂಬಂತೆ ನೋಡಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ನಾನು ಗಟ್ಟಿ ಹಾಗೂ ಪ್ರಗತಿಪರ ಮಹಿಳೆ. ಪ್ರತಿದಿನವೂ ಆರೋಗ್ಯ ಮತ್ತು ಸಂತೋಷದಿಂದ ಇರುವುದನ್ನು ಖಚಿತಪಡಿಸಿಕೊಳ್ಳಲು ನಾನು ಕೆಲಸ ಮಾಡುತ್ತೇನೆ’ ಎಂದು ಮಲೈಕಾ ತಿಳಿಸಿದ್ದಾರೆ.

‘ನಾನು ನನ್ನ ತಾಯಿಯ ಪ್ರತಿಬಿಂಬ. ಏಕೆಂದರೆ, ನಾನು ಆಕೆಯ ಶಕ್ತಿ ಮತ್ತು ಧೈರ್ಯವನ್ನು ತುಂಬಿಕೊಂಡಿದ್ದೇನೆ. ಆಕೆಯ ಜೀವನವನ್ನು ಪ್ರತಿಬಿಂಬಿಸುತ್ತೇನೆ. ಆಕೆ ನನಗೆ ಸ್ವತಂತ್ರವಾಗಿ ಯೋಚಿಸಲು ಮತ್ತು ಬದುಕಲು ಹೇಳುತ್ತಿದ್ದಳು’ ಎಂದು ಮಲೈಕಾ ಹೇಳಿದ್ದಾರೆ.

ಕಳೆದ ಹಲವು ವರ್ಷಗಳಿಂದಲೂ ಮಲೈಕಾ ಅವರ ಲವ್ ಲೈಫ್ ಬಗ್ಗೆ ಚರ್ಚೆಗಳಾಗುತ್ತಲೇ ಇವೆ. ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಮತ್ತು ಅವರ ಮಧ್ಯದ ವಯಸ್ಸಿನ ಅಂತರವೇ ಇದಕ್ಕೆಲ್ಲ ಕಾರಣ. 36 ವರ್ಷದ ಅರ್ಜುನ್ ಮತ್ತು 48 ವರ್ಷದ ಮಲೈಕಾ 2016ರಿಂದಲೂ ರಿಲೇಷನ್‌ಶಿಪ್‌ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.