ತಿರುವನಂತಪುರ: ಮಾಲಿವುಡ್ನ ಮೆಗಾಸ್ಟಾರ್ ಮಮ್ಮೂಟ್ಟಿ ಮಂಗಳವಾರ 70ನೇ ವರ್ಷಕ್ಕೆ ಕಾಲಿಟ್ಟಿದ್ದು, ಮಲಯಾಳಂ ಚಿತ್ರರಂಗ, ರಾಜಕಾರಣಿಗಳು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಸೇರಿದಂತೆ ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಳೆಯನ್ನೇ ಹರಿಸಿದ್ದಾರೆ.

ಕೇರಳದ ಪ್ರಮುಖ ದಿನಪತ್ರಿಕೆಗಳು ಮಮ್ಮೂಟ್ಟಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಇಡೀ ಪುಟವನ್ನು ಮೀಸಲಿಟ್ಟರೆ, ಖಾಸಗಿ ವಾಹಿನಿಗಳು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದವು.

ಫೇಸ್ಬುಕ್ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಮಮ್ಮೂಟ್ಟಿ ಅವರನ್ನು ‘ಅನನ್ಯ ಪ್ರತಿಭೆ’ಎಂದು ಶ್ಲಾಘಿಸಿದ್ದಾರೆ. ನಂತರ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದರು. ವಿರೋಧಪಕ್ಷದ ನಾಯಕ ವಿ.ಡಿ.ಸತೀಶನ್ ಕೂಡಾ ಶುಭ ಹಾರೈಸಿದರು. ಚಿತ್ರರಂಗದ ಹಿರಿಯರು ಸೇರಿದಂತೆ ಯುವನಟರು ಶುಭಾಶಯ ಕೋರಿದ್ದಾರೆ.

ತಮ್ಮ 70ನೇ ವಯಸ್ಸಿನಲ್ಲೂ ಮಮ್ಮೂಟ್ಟಿ ಇಂದಿನ ಯುವಪ್ರೇಕ್ಷಕರನ್ನೂ ಸೆಳೆಯುವಲ್ಲಿ ಸಫಲರಾಗಿದ್ದಾರೆ. ಮಾಲಿವುಡ್ನಲ್ಲಿ ಹಲವು ಯುವನಟರು ಬಂದು ಹೋದರೂ, ತಮ್ಮ ಐದು ದಶಕಗಳ ವೃತ್ತಿಜೀವನದಲ್ಲಿ ಮಮ್ಮೂಟ್ಟಿ ಇನ್ನೂ ತಮ್ಮ ವರ್ಚಸ್ಸು ಉಳಿಸಿಕೊಂಡಿದ್ದಾರೆ. ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ.

ರಾಮ್ ಚರಣ್, ಸಮಂತಾರ ’ಒಂದು ಮುತ್ತಿನ ಕಥೆ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.