ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ನಟನೆಯ ‘ಮ್ಯಾನ್ಷನ್ ಹೌಸ್ ಮುತ್ತು’ ಸಿನಿಮಾದ ಡಬ್ಬಿಂಗ್ ಮುಗಿದಿದೆ. ನವೆಂಬರ್‌ನಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾಗಳ ನಿರ್ದೇಶಕ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಗಿರೀಶ್ ಶಿವಣ್ಣ, ಸಮೀಕ್ಷಾ ರಾಮ್, ಸತೀಶ್ ಚಂದ್ರ, ವಿಜೇತ್ ಸುಮಂತ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

ಕಾಮಿಡಿ ಥ್ರಿಲ್ಲರ್ ‘ಮ್ಯಾನ್ಷನ್ ಹೌಸ್ ಮುತ್ತು’ ಸಿನಿಮಾದಲ್ಲಿ ಒಂದಷ್ಟು ಸಂದೇಶ ಸಾರುವ ಅಂಶಗಳಿವೆ. ಪ್ರಕೃತಿ ಪ್ರೇಮಿ ಮುತ್ತುವಿನ ಸುತ್ತ ಇಡೀ ಕಥಾನಕ ಸಾಗುತ್ತದೆ. ಕೇಸರಿ ಫಿಲ್ಮಂ ಕ್ಯಾಪ್ಟರ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗಿದೆ. ನಟನೆ ಜೊತೆಗೆ ನವೀನ್ ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ನವೀನ್ ಕುಮಾರ್ ಚೆಲ್ಲ ಛಾಯಾಗ್ರಾಹಣ ಸಿನಿಮಾಕ್ಕಿದೆ. ಮಡಿಕೇರಿ ಸುತ್ತಮುತ್ತ 40 ದಿನಗಳ ಕಾಲ ಸಿನಿಮಾದ ಶೂಟಿಂಗ್ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ನವೆಂಬರ್‌ನಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.