ನವದೆಹಲಿ: ತನ್ನ ತಂದೆ ವೆಸ್ಟ್‌ಇಂಡೀಸ್ ಕ್ರಿಕೆಟ್‌ನ ದಂತಕಥೆ ವಿವಿಯನ್ ರಿಚರ್ಡ್ಸ್ ಅವರಿಂದ ದೊಡ್ಡ ಮೊತ್ತದ ಆಸ್ತಿಯನ್ನು ಪಡೆದಿದ್ದಾರೆ ಎಂಬ ಮಾತಿಗೆ ಡಿಸೈನರ್ ಮಸಾಬಾ ಗುಪ್ತಾ ಖಡಕ್ ಉತ್ತರ ನೀಡಿದ್ದಾರೆ.

ರಿಚರ್ಡ್ಸ್ ಹಾಗೂ ಹಾಗೂ ಬಾಲಿವುಡ್ ನಟಿ ನೀನಾ ಗುಪ್ತಾ ಅವರ ಪುತ್ರಿ ಮಸಬಾ ಗುಪ್ತಾ, ಇತ್ತೀಚೆಗೆ ತಮ್ಮ ಬದುಕಿನ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಎರಡು ವಿಭಿನ್ನ ಕ್ಷೇತ್ರಗಳ ಮೇರು ವ್ಯಕ್ತಿಗಳ ಪುತ್ರಿಯಾದ ಮಸಾಬಾ, ಪೋಷಕರ ಆರೈಕೆಯಲ್ಲೇ ಬೆಳೆದರೂ ಜನಮನದಿಂದ ದೂರವಾಗಿದ್ದೇನೆ ಎಂಬ ಭಾವವನ್ನು ಎಂದೂ ಅವರು ಅನುಭವಿಸಿಲ್ಲವಂತೆ. ಆದರೆ ತನ್ನ ತಂದೆ ವಿವಿಯನ್ ರಿಚರ್ಡ್ಸ್ ಅವರಿಂದ ಸಾಕಷ್ಟು ಸಂಪತ್ತು ಗಳಿಸಿದ್ದೇನೆ ಎಂಬ ಮಾತು ಎಲ್ಲೆಡೆ ಹರಿದಾಡುತ್ತಿದೆ ಎಂದಿದ್ದಾರೆ.

ತನ್ನ ಪಾಲಕರು ಮದುವೆಯಾಗಲಿಲ್ಲ, ಒಟ್ಟಿಗೆ ಬಾಳಲಿಲ್ಲ. ತಂದೆ ಮತ್ತು ತಾಯಿ ಪ್ರತ್ಯೇಕವಾಗಿಯೇ ಇದ್ದರೂ, ಮಸಾಬಾ ತನ್ನ ತಂದೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಳು. ಆದರೆ ತಂದೆಯಿಂದ ತನಗೆ ದೊರೆತ ದೊಡ್ಡ ಆಸ್ತಿ ಯಾವುದು ಎಂಬುದನ್ನು ಮಸಾಬಾ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಟ್ವೀಕ್ ಇಂಡಿಯಾ ಎಂಬ ಯುಟ್ಯೂಬ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನನ್ನ ಬಳಿ ಏನಿದೆಯೋ ಅದರಿಂದ ನಾನು ಅತ್ಯಂತ ಸಂತುಷ್ಟಳಾಗಿದ್ದೇನೆ. ನನ್ನ ತಂದೆ ಹಾಗೂ ತಾಯಿಯಿಂದಾಗಿ ನಾನು ಯಶಸ್ಸು ಗಳಿಸಿದ್ದೇನೆ ಎಂದು ಹಲವರು ಹೇಳುತ್ತಾರೆ. ನೂರಾರು ಕೋಟಿ ಮೊತ್ತದ ಆಸ್ತಿಯನ್ನು ತಂದೆ ನೀಡಿರುವಾಗ ಬೇರೇನು ಮಾಡಬೇಕು ಎಂದೂ ಕೆಲವರು ಹೇಳಿದ್ದಾರೆ. ಆದರೆ ಯಾವ ನೂರಾರು ಕೋಟಿಯೂ ನನಗೆ ಬಂದಿಲ್ಲ. ಏನೆಲ್ಲಾ ನನ್ನ ಬಳಿ ಇದೆಯೋ ಅವೆಲ್ಲವೂ ನಾನು ಗಳಿಸಿದ್ದು’ ಎಂದು ಉತ್ತರಿಸಿದ್ದಾರೆ.

‘ನನ್ನಲ್ಲಿದ್ದ ಟೆನ್ನಿಸ್ ಆಸೆಯನ್ನು ವೃತ್ತಿಯಾಗಿ ಮುಂದುವರಿಸಲು ವಿವಿಯನ್ ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದರು. ಟೆನ್ನಿಸ್ ಕೋರ್ಟ್‌ನಲ್ಲಿ ಆಡಲು ಆಧುನಿಕ ಶೈಲಿಯ ಉಡುಪುಗಳನ್ನು ಅವರು ತಂದು ಕೊಡುತ್ತಿದ್ದರು. ನಾನೊಬ್ಬ ಟೆನ್ನಿಸ್ ತಾರೆ ಆಗಬೇಕು ಎಂಬುದು ಅವರ ಬಯಕೆಯಾಗಿತ್ತು ಎನಿಸುತ್ತದೆ. ನಾನೂ ಆಡುತ್ತಿದ್ದೆ. ಟೆನ್ನಿಸ್‌ನಲ್ಲಿ ಮಹಾರಾಷ್ಟ್ರಕ್ಕೆ ಮೂರನೇ ಸ್ಥಾನದಲ್ಲಿದ್ದೆ. ನನಗೆ ಅಷ್ಟೇ ಮಾಡಲು ಸಾಧ್ಯವಾಗಿದ್ದು’ ಎಂದು ಮಸಬಾ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಮಸಾಬಾ ಹಾಗೂ ಸತ್ಯದೀಪ್ ಮಿಶ್ರಾ ಅವರ ವಿವಾಹ ಕಾರ್ಯಕ್ರಮದಲ್ಲಿ ವಿವಿಯನ್ ರಿಚರ್ಡ್ಸ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.