ವೈಯಕ್ತಿಕ ಕಾರಣಗಳಿಂದಾಗಿ ಸ್ಯಾಂಡಲ್ವುಡ್ನಿಂದ ಸಣ್ಣ ವಿರಾಮ ತೆಗೆದುಕೊಂಡಿದ್ದ ನಟಿ ಮೇಘನಾ ರಾಜ್ ‘ತತ್ಸಮ ತದ್ಭವ’ ಚಿತ್ರದ ಮೂಲಕ ಮರುಪ್ರವೇಶ ಪಡೆದಿದ್ದಾರೆ. ಪ್ರಜ್ವಲ್ ದೇವರಾಜ್, ಮೇಘನರಾಜ್, ಶ್ರುತಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು, ಬೆಂಗಳೂರಿನಲ್ಲಿ ಚಿತ್ರದ ಅಂತಿಮ ದೃಶ್ಯಗಳನ್ನು ಚಿತ್ರೀಕರಿಸಲಾಯಿತು.

‘ನಿಜವಾದ ಸ್ನೇಹಿತರು ಯಾವಾಗಲೂ ಜತೆಗಿರುತ್ತಾರೆ. ಕಷ್ಟ ಕಾಲದಲ್ಲಿಯೂ ಕೈಹಿಡಿದ ಅಂತಹ ಕೆಲ ಸ್ನೇಹಿತರು ನನ್ನ ಪಾಲಿಗೆ ಸಿಕ್ಕಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪ್ರವೇಶ ಪಡೆಯಬೇಕೆಂದು ನನ್ನ ಸ್ನೇಹಿತರೆಲ್ಲ ನನಗಾಗಿಯೇ ಈ ಸಿನಿಮಾ ಮಾಡಿದ್ದಾರೆ. ಪನ್ನಗ ಭರಣ ಹಾಗೂ ಸ್ಫೂರ್ತಿ ಅನಿಲ್ ಚಿತ್ರ ನಿರ್ಮಾಣ ಮಾಡಿದ್ದು, ವಿಶಾಲ್ ಆತ್ರೇಯ ಒಳ್ಳೆಯ ಕಥೆಯೊಂದಿಗೆ ನಿರ್ದೇಶನ ಮಾಡಿದ್ದಾರೆ’ ಎಂದರು ಮೇಘನಾ ರಾಜ್.

‘ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಟಿ ಮೇಘನಾ ಜತೆಗೆ ಈ ಸಿನಿಮಾ ಎಂದಾಗ ನಮ್ಮದೇ ಸಿನಿಮಾ ಎಂಬ ಭಾವನೆ ಮೂಡಿತು. ಸ್ನೇಹಿತರ ಸಿನಿಮಾದಲ್ಲಿ ಅಭಿನಯಿಸಿದ ಖುಷಿಯಿದೆ’ಎಂದು ಪ್ರಜ್ವಲ್ ತಿಳಿಸಿದರು.

‘ಇದೊಂದು ಕ್ರೈಮ್ ಥ್ರಿಲ್ಲರ್ ಚಿತ್ರ. ರೀರೆಕಾರ್ಡಿಂಗ್ ನಡೆಯುತ್ತಿದೆ. ಚುನಾವಣೆ ಮುಗಿದ ನಂತರ ತೆರೆಗೆ ಬರುತ್ತೇವೆ’ ಎಂದು ನಿರ್ಮಾಪಕ ಪನ್ನಗ ಭರಣ ಹೇಳಿದರು.

ನಟಿ ಶ್ರುತಿ ಮಾತನಾಡಿ, ‘ಸಮಾಜದಲ್ಲಿ ಯಾವುದೇ ಹೆಣ್ಣಿಗಾದರೂ ಅನುಕಂಪಕ್ಕಿಂತ ಅವಕಾಶ ಕೊಡುವುದು ಮುಖ್ಯ. ನಾನು ಈ ಚಿತ್ರದಲ್ಲಿ ಮನಶ್ಶಾಸ್ತ್ರ ತಜ್ಞೆಯಾಗಿ ಕಾಣಿಸಿಕೊಂಡಿದ್ದೇನೆ’ ಎಂದರು. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.