ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ನಟಿಸಿರುವ ‘ತತ್ಸಮ ತದ್ಭವ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟರಾದ ಧ್ರುವ ಸರ್ಜಾ ಹಾಗೂ ಡಾಲಿ ಧನಂಜಯ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಈ ಚಿತ್ರದ ಮೂಲಕ ಮೇಘನಾ ರಾಜ್ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ‘ನಾನು ಸಿನಿಮಾದಲ್ಲಿ ನಟಿಸಬಾರದು ಎಂದು ನಿರ್ಧರಿಸಿದಾಗ ಬಂದ ಸಿನಿಮಾವಿದು. ಈ ಚಿತ್ರ ಆರಂಭವಾಗಲು ನನ್ನ ಪತಿ ಚಿರು ಸರ್ಜಾ ಕಾರಣ. ಅವರಿಗೆ ಪ್ರಜ್ವಲ್ ಹಾಗೂ ಪನ್ನಗ ಅವರ ಜೊತೆ ಸೇರಿ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬ ಆಸೆಯಿತ್ತು. ಹಾಗಾಗಿ ಈ ಚಿತ್ರವಾಗಿದೆ’ ಎಂದರು ಮೇಘನಾ ರಾಜ್.

ವಿಶಾಲ್ ಆತ್ರೇಯ ಚಿತ್ರದ ನಿರ್ದೇಶಕರು. ಪನ್ನಗಾಭರಣ, ಸ್ಫೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್ 15ಕ್ಕೆ ತೆರೆಗೆ ಬರಲಿದೆ.

‘ನಾನು ಈವರೆಗೂ ಮಾಡದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ. ಬಹಳ ಇಷ್ಟಪಟ್ಟು ಮಾಡಿರುವ ಸಿನಿಮಾವಿದು. ಮತ್ತೊಂದು ವಿಶೇಷವೆಂದರೆ, ಟ್ರೇಲರ್ಗೆ ನಮ್ಮ ತಂದೆ ದೇವರಾಜ್ ಅವರು ಧ್ವನಿ ನೀಡಿದ್ದಾರೆ’ ಎಂದು ಪ್ರಜ್ವಲ್ ದೇವರಾಜ್ ತಿಳಿಸಿದರು.

‘ನಾನು ಸಾಮಾನ್ಯವಾಗಿ ಭಾವುಕನಾಗುವುದಿಲ್ಲ. ಇಂದು ಏಕೋ ಗೊತ್ತಿಲ್ಲ, ಸ್ವಲ್ಪ ಭಾವುಕನಾಗುತ್ತಿದ್ದೇನೆ. ನಾನು ನಿರ್ಮಾಪಕನಾಗಬೇಕು ಎಂಬ ಕನಸು ಇರಲಿಲ್ಲ. ಆದರೂ ನಿರ್ಮಾಪಕನಾದೆ. ನನ್ನೊಟ್ಟಿಗೆ ಕೆಲವು ಸ್ನೇಹಿತರು ಕೈಜೋಡಿಸಿದರು. ಈಗ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಇನ್ನೊಂದು ವಿಶೇಷವೆಂದರೆ, ನಮ್ಮ ಚಿತ್ರದ ಟಿಕೆಟ್ ಪಡೆದುಕೊಂಡವರು ಕೊನೆಯಲ್ಲಿ ಆ ಟಿಕೆಟ್ನಲ್ಲಿರುವ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಬೇಕು. ಆಗ ಹಲವರಿಗೆ ಗಿಫ್ಟ್ ಕೂಪನ್ಗಳು ದೊರೆಯಲಿವೆ’ಎಂದರು ಪನ್ನಗಾಭರಣ.

ವಾಸುಕಿ ವೈಭವ್ ಸಂಗೀತ ನಿರ್ದೇಶನ, ಶ್ರೀನಿವಾಸ ರಾಮಯ್ಯ ಛಾಯಾಗ್ರಾಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.