ಮಲೆಯಾಳಂ ನಟ ಮೋಹನ್ಲಾಲ್ ತಮ್ಮ ಮುಂದಿನ ‘ಆರಾಟ್ಟ್’ ಸಿನಿಮಾದ ಶೂಟಿಂಗ್ ಅನ್ನು ಇಂದಿನಿಂದ ಆರಂಭಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಚಿತ್ರದ ಸೆಟ್ನಲ್ಲಿನ ಕೊಲಾಜ್ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ.

ಹಿಂದೆ ಮೋಹನ್ಲಾಲ್ ನಟಿಸಿದ್ದ ‘ಮಿ. ಫ್ರಾಡ್’ ಹಾಗೂ ‘ವಿಲನ್’ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಬಿ. ಉನ್ನಿಕೃಷ್ಣನ್ ಈ ಸಿನಿಮಾಕ್ಕೂ ನಿರ್ದೇಶನ ಮಾಡಲಿದ್ದಾರೆ. ‘ಪುಲಿಮುರುಗನ್’ ಸಿನಿಮಾಕ್ಕೆ ದೃಶ್ಯಕಥೆ ಬರೆದಿದ್ದ ಉದಯ್ಕೃಷ್ಣ ಈ ಸಿನಿಮಾಕ್ಕೂ ಕಥೆ ಬರೆದಿದ್ದಾರೆ.

ಮೋಹನ್ ಇತ್ತೀಚೆಗೆ ‘ದೃಶ್ಯಂ 2’ ಚಿತ್ರದ ಚಿತ್ರೀಕರಣ ಮುಗಿಸಿದ್ದರು. 2013ರಲ್ಲಿ ತೆರೆ ಕಂಡ ‘ದೃಶ್ಯಂ’ ಸಿನಿಮಾದ ನಿರ್ದೇಶಕ ಜೀತು ಜೋಸೆಫ್ ಈ ಸಿನಿಮಾಕ್ಕೂ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.