ಮಲಯಾಳಂನ ಖ್ಯಾತ ನಟ ಮೋಹನ್‌ಲಾಲ್ ಇದೇ ಮೊದಲ ಬಾರಿಗೆ ನಿರ್ದೇಶಕನ ಟೋಪಿ ಧರಿಸಿದ್ದಾರೆ. ಇವರ ಚೊಚ್ಚಲ ನಿರ್ದೇಶನದ ಬರೋಜ್ ಸಿನಿಮಾ ಮಾರ್ಚ್‌ನಲ್ಲಿ ತೆರೆ ಕಾಣಲಿದೆ. ಈ ವಿಷಯವನ್ನು ಸಿನಿಮಾಟೊಗ್ರಾಫರ್ ಸಂತೋಷ್ ಶಿವನ್ ಬಹಿರಂಗ ಪಡಿಸಿದ್ದಾರೆ.

ದೊಡ್ಡ ಬಜೆಟ್‌ನ 3ಡಿ ಪ್ಯಾಂಟಸಿ ಸಿನಿಮಾವಾಗಿರುವ ಬರೋಜ್‌ನಲ್ಲಿ ಸ್ಪೇನ್, ಪೋರ್ಚುಗಲ್, ಘಾನ ಹಾಗೂ ಅಮೆರಿಕದ ಕಲಾವಿದರು ನಟಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶಿವನ್ ಮೋಹನ್‌ಲಾಲ್ ನಿರ್ದೇಶನದ ಬರೋಜ್ ಮಾರ್ಚ್‌ನಲ್ಲಿ ಆರಂಭವಾಗಲಿದೆ ಎಂದಿದ್ದಾರೆ. ಈ ಸಿನಿಮಾಕ್ಕೆ ನಿರ್ದೇಶಕ ಜಿಜೊ ಪುನ್ನೋಸ್ ಚಿತ್ರಕಥೆ ಬರೆದಿದ್ದಾರೆ. ಇವರು 1984ರ ಮಲಯಾಳಂನ ಫ್ಯಾಂಟಸಿ ಚಿತ್ರ ಮೈ ಡಿಯರ್ ಕುಟ್ಟಿಚಾತನ್ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದರು. ಈ ಸಿನಿಮಾಕ್ಕೆ ಹಿಂದಿಯಲ್ಲಿ ಛೋಟಾ ಚೇತನ್ ಎಂದು ಹೆಸರಿಸಲಾಗಿತ್ತು.

60 ವರ್ಷದ ಮೋಹನ್‌ಲಾಲ್ ಅವರ ದ್ರಶ್ಯಂ 2 ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ಜೀತು ಜೋಸೆಫ್ ನಿರ್ದೇಶನದ ಈ ಸೀಕ್ವೆಲ್‌ನಲ್ಲಿ ಜಾರ್ಜ್ ಕುಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮೋಹನ್‌ಲಾಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.