ಪ್ರಸ್ತುತ ನಾವು ಅಂತರರಾಷ್ಟ್ರೀಯ ಸ್ಟುಡಿಯೊಗಳ ಮುಂದೆ ಬೇಡುವ ಸ್ಥಿತಿ ಬಂದಿದೆ. ನಮ್ಮ ನೆಲದ ಸಿನಿಮಾವನ್ನು ನಮ್ಮವರಿಗೆ ತೋರಿಸಲು ಹೊರದೇಶದಲ್ಲಿರುವವರ ಒಪ್ಪಿಗೆ ಬೇಕು. ಈ ಸ್ಥಿತಿಗೆ ನಮ್ಮನ್ನು ನಾವೇ ತಂದುಕೊಂಡಿದ್ದೇವೆ ಎನ್ನುವುದು ದುರದೃಷ್ಟಕರ. ಈ ವ್ಯವಸ್ಥೆಯನ್ನು ಪ್ರೇಕ್ಷಕರು ಒಡೆಯಬೇಕಿದೆ. ಕರ್ನಾಟಕಕ್ಕೆ ತನ್ನದೇ ನೆಲದಲ್ಲಿ ಬೆಳೆದ ಒಟಿಟಿಯೊಂದರ ಅವಶ್ಯಕತೆ ಇದೆ