ಹಿಂದಿನ ವರ್ಷ ತೆರೆಕಂಡ ದುನಿಯಾ ಸೂರಿ ನಿರ್ದೇಶನದ ‘ಟಗರು’ ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ‘ಡಾಲಿ’ ಪಾತ್ರ ನಟ ಧನಂಜಯ್‌ಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿದ್ದು ದಿಟ. ಇದರಿಂದ ಉತ್ತೇಜಿತರಾದ ಅವರು ತಮ್ಮ ಪಿಕ್ಚರ್‌ಗೆ ‘ಡಾಲಿ ಪಿಕ್ಚರ್’ ಎಂದು ಹೆಸರಿಟ್ಟಿದ್ದು ಹಳೆಯ ಸುದ್ದಿ. ಈಗ ‘ಡಾಲಿ’ ಹೆಸರಿನ ಸಿನಿಮಾ ಕೂಡ ಸೆಟ್ಟೇರಿದ್ದು, ಇದಕ್ಕೆ ಧನಂಜಯ್ ಅವರೇ ಹೀರೊ.

ಈ ಚಿತ್ರಕ್ಕೆ ಯೋಗೇಶ್ ಮೋಷನ್ ಪಿಕ್ಚರ್ಸ್ ಲಾಂಛನದಡಿ ಯೋಗೇಶ್ ನಾರಾಯಣ್ ಬಂಡವಾಳ ಹೂಡಿದ್ದಾರೆ. ‘ಮೊದಲ ಸಲ’ ಹಾಗೂ ‘ಎರಡನೇ ಸಲ’ ಸಿನಿಮಾ ನಿರ್ಮಾಣ ಮಾಡಿದ್ದ ಅವರಿಗೆ ಇದು ಮೂರನೇ ಚಿತ್ರ. ಅಂದಹಾಗೆ ರಚಿತಾ ರಾಮ್ ಮತ್ತು ಭವ್ಯಾ ಈ ಚಿತ್ರದ ನಾಯಕಿಯರು.

ಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ನೆರವೇರಿತು. ಪದ್ಮಜಾ ನಾರಾಯಣ್ ಅವರು ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿದರು. ಭಾವನಾ ನಾಗೇಶ್ ಕ್ಯಾಮೆರಾ ಚಾಲನೆ ಮಾಡಿದರು.

ಇದನ್ನೂ ಓದಿ:ಡಾಲಿ ಲಿಕ್ಕರ್ ಅಂಗಡಿ ತೆರೆದ ಧನಂಜಯ್ ಅಭಿಮಾನಿ!

ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಪ್ರಭು ಶ್ರೀನಿವಾಸ್. ಈ ಹಿಂದೆ ಅವರು ‘ಗಣಪ’,‘ಕರಿಯ 2’, ‘ಪಾರಿಜಾತ’ ಹಾಗೂ ‘ಜೀವ’ ಚಿತ್ರಗಳನ್ನು ನಿರ್ದೇಶಿಸಿದ್ದರು.

ಧನಂಜಯ್ ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಯಶಸ್ಸು ಮರೀಚಿಕೆಯಾಗಿತ್ತು. ಆ ಕೋಪ ಮತ್ತು ಅವರೊಳಗಿನ ನಟನೆಯ ಹಸಿವು ಹಿಂಗಿಸಿದ್ದೇ ‘ಡಾಲಿ’ ಪಾತ್ರ. ಜೊತೆಗೆ ಜನರು ಆಟೊ, ಕ್ಯಾಬ್, ಬೈಕ್, ಕಾರುಗಳ ಮೇಲೆ ‘ಡಾಲಿ’ ಹೆಸರು ಮುದ್ರಿಸಿಕೊಂಡು ಅದಕ್ಕೊಂದು ಬ್ರಾಂಡ್ ಮೌಲ್ಯ ಸೃಷ್ಟಿಸಿದರು. ಹಾಗಾಗಿಯೇ, ಈ ಚಿತ್ರದ ಮೇಲೂ ನಿರೀಕ್ಷೆಯ ಭಾರ ಹೆಚ್ಚಿಸಿರುವುದು ಸಹಜ.

‘ಡಾಲಿ’ ಸಿನಿಮಾದ ಶೂಟಿಂಗ್ ಡಿಸೆಂಬರ್ 23ರಿಂದ ಲಖನೌದಲ್ಲಿ ಶುರುವಾಗಲಿದೆ. ಮೊದಲ ಹಂತದಲ್ಲಿ ಲಖನೌ ಹಾಗೂ ಆಗ್ರಾದಲ್ಲಿ ಚಿತ್ರೀಕರಣ ನಡೆಸುವ ಯೋಚನೆ ಚಿತ್ರತಂಡದ್ದು. ಎರಡನೇ ಹಂತದಲ್ಲಿ ಬೆಂಗಳೂರು, ಮೈಸೂರಿನಲ್ಲಿ ನಡೆಸಲು ಸಿದ್ಧತೆ ನಡೆಸಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಶ್ರೀನಿವಾಸನ್ ದೇವಾಂಶಂ ಅವರ ಛಾಯಾಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.