ಜೀವನಪೂರ್ತಿ ಮದುವೆಯೇ ಆಗುವುದಿಲ್ಲ’ ಎಂದು ದೃಢನಿಶ್ಚಯ ಮಾಡಿ ಸಿನಿಮಾ ಸಂಗೀತ ಕ್ಷೇತ್ರದಲ್ಲೇ ಮುಳುಗಿಹೋಗಿದ್ದ ಸಂಗೀತ ನಿರ್ದೇಶಕ ವಿ.ಮನೋಹರ್, ವೇಣಿಯವರನ್ನು ಮದುವೆ ಆಗಲು ಕಾರಣವೇನು?

‘ಅಯ್ಯೊ.. ಅದೊಂದು ಡಿಫರೆಂಟ್ ಕಥೆ! ನನಗೆ ಒಬ್ಬಂಟಿ ಜೀವನ ಒಗ್ಗಿಹೋಗಿತ್ತು. ನನ್ನ ಜೊತೆಗೆ ಮನೆಯಲ್ಲಿ ಸಿನಿಮಾ ಗೆಳೆಯರ ದಂಡೇ ವಾಸಿಸುತ್ತಿತ್ತು. ಅಲ್ಲಿ ಬರೀ ಸಿನಿಮಾದ ಚರ್ಚೆ. ಮದುವೆಯ ವಯಸ್ಸೂ ದಾಟಿ ಹೋಗಿತ್ತು. ಹಾಗೆಂದರೆ ಮುದುಕನಾಗಿದ್ದೆ ಎಂದರ್ಥವಲ್ಲ. ಅದೇ ವೇಳೆ, ಇವರ ತಮ್ಮ ಗಾಯಕನಾಗಬೇಕೆಂದು ಇಚ್ಛಿಸಿದ್ದ. ಅವನನ್ನು ಕರೆದುಕೊಂಡು ಇವರು ನಮ್ಮ ಮನೆಗೆ ಬಂದರು...’ ಎಂದು ನಗುತ್ತಾ ತಮ್ಮ ಪಕ್ಕದಲ್ಲೇ ಕುಳಿತಿದ್ದ ಪತ್ನಿ ವೇಣಿ ಕಡೆಗೆ ನೋಡಿ ನಕ್ಕರು ಮನೋಹರ್.

140ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡಿ, ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿ, ನೂರಾರು ಜನಪ್ರಿಯ ಹಾಡುಗಳನ್ನು ಬರೆದಿರುವ ಮನೋಹರ್ ಪತ್ನಿ ವೇಣಿ ಜೊತೆಗೆ ‘ಪ್ರಜಾವಾಣಿ’ ಕಚೇರಿಗೆ ಭೇಟಿ ನೀಡಿದ್ದು ಸ್ಪರ್ಧೆಯೊಂದರ ತೀರ್ಪುಗಾರರಾಗಿ. ಪ್ರಜಾವಾಣಿ ಆನ್‌ಲೈನ್ ಪತ್ರಿಕೆಯು, ‘ಪ್ರೇಮಿಗಳ ದಿನಾಚರಣೆ’ಯ ಸಂದರ್ಭಕ್ಕೆ ಏರ್ಪಡಿಸಿದ್ದ ‘ನನ್ನ ಮೊದಲ ಪ್ರೇಮನಿವೇದನೆ’ ಸ್ಪರ್ಧೆಗೆ ನೂರಾರು ಪ್ರವೇಶಗಳು ಬಂದಿದ್ದವು. ಅವುಗಳಲ್ಲಿ ಅತ್ಯುತ್ತಮ ಮೂರು ಪ್ರೇಮನಿವೇದನೆಗಳನ್ನು ಮನೋಹರ್– ವೇಣಿ ದಂಪತಿ ಆಯ್ಕೆ ಮಾಡಬೇಕಿತ್ತು. ಅದೇ ಸಂದರ್ಭದಲ್ಲಿ ಈ ದಂಪತಿಯ ವಿಶೇಷ ಸಂದರ್ಶನವೂ ನಡೆಯಿತು. ಸಂದರ್ಶನದಲ್ಲಿ ಈ ದಂಪತಿಯ ಪ್ರೇಮಪ್ರಕರಣದ ಗುಟ್ಟೂ ಹೊರಗೆ ಬಂತು!

‘ನಮ್ಮ ಪ್ರೇಮನಿವೇದನೆ ಆಗಿದ್ದು ಫೋನ್‌ನಲ್ಲಿ. ಮೊದಲು ಪ್ರಪೋಸ್ ಮಾಡಿದ್ದು ನಾನೇ..’ ಎಂದು ಮತ್ತೆ ನಕ್ಕ ಮನೋಹರ್ ಪತ್ನಿಯ ಕಡೆಗೆ ನೋಡಿದರು. ‘ನೀವೇನು ಮಾಡಿದ್ರಿ..?’ ಎಂದು ಅವರನ್ನು ಪ್ರಶ್ನಿಸಿದರೆ, ‘ನಾನು ಫೋನ್ ಕಟ್ ಮಾಡ್ದೆ..’ ಎಂದರು ವೇಣಿ. ಅವರ ಮುಖದಲ್ಲಿ ‘ಆ ದಿನಗಳ’ ಮಧುರ ನೆನಪುಗಳ ಮೆರವಣಿಗೆ ನಡೆಯುತ್ತಿತ್ತು. ‘ಆಮೇಲೆ...?’

ಈ ಬುಧವಾರ (19ರಂದು) ‘ನನ್ನ ಮೊದಲ ಪ್ರೇಮನಿವೇದನೆ’ ಸ್ಪರ್ಧೆಯ ಫಲಿತಾಂಶ ಹೊರಬೀಳಲಿದೆ. ಅಂದೇ ವಿ.ಮನೋಹರ್– ವೇಣಿ ದಂಪತಿಯ ಪೂರ್ಣ ಸಂದರ್ಶನದ ವಿಡಿಯೊprajavani.net ನಲ್ಲಿ ಕಾಣಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.