ಮುಂಬೈ: ಗೂಢಚರ ಜಗತ್ತಿನ ಪಾಲಿಗೆ ದಂತಕಥೆಯಂತೆ ಇರುವ ರಾಮೇಶ್ವರನಾಥ ಕಾವ್ ಅವರ ಜೀವನವನ್ನು ಆಧರಿಸಿದ ವೆಬ್ ಸರಣಿ ಹಾಗೂ ಸಿನಿಮಾ ತೆರೆಯ ಮೇಲೆ ಬರಲಿದೆ. ಕಾವ್ ಅವರ ಕಥೆಯನ್ನು ಈ ಎರಡು ಪ್ರಕಾರಗಳಲ್ಲಿ ತೆರೆಯ ಮೇಲೆ ತರುವುದಾಗಿಹಿಂದಿ ಸಿನಿಮಾ ನಿರ್ಮಾಪಕ ಫಿರೋಜ್ ನಾಡಿಯಾಡ್‌ವಾಲಾ ಘೋಷಿಸಿದ್ದಾರೆ. ಕಾವ್ ಅವರ ಪಾತ್ರವನ್ನು ಖ್ಯಾತ ನಟ ನಾನಾ ಪಾಟೇಕರ್ ನಿಭಾಯಿಸಲಿದ್ದಾರೆ.

ಅಂದಹಾಗೆ, ರಾಮೇಶ್ವರನಾಥ ಕಾವ್ ಅವರು ಭಾರತದ ಗುಪ್ತಚರ ಸಂಸ್ಥೆ ‘ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್’ನ (ರಾ) ಮೊದಲ ಮುಖ್ಯಸ್ಥರಾಗಿದ್ದರು. ನಾಡಿಯಾಡ್‌ವಾಲಾ ಅವರು ಈ ಸರಣಿಗೆ ಸಂಬಂಧಿಸಿದ ಕೆಲಸಗಳನ್ನು ಐದು ವರ್ಷಗಳಿಂದ ಮಾಡುತ್ತಿದ್ದರಂತೆ. ವೆಬ್ ಸರಣಿಯನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

‘ಈ ಯೋಜನೆಗೆ ಸಂಬಂಧಿಸಿದ ಕೆಲಸಗಳು ಐದು ವರ್ಷಗಳಿಂದ ನಡೆದಿವೆ. ಈ ಕಥೆಯನ್ನು ಎಲ್ಲರಿಗೂ ಹೇಳಬೇಕಾಗಿದೆ, ಎಲ್ಲರೂ ಇದನ್ನು ತಿಳಿದುಕೊಳ್ಳಬೇಕಿದೆ. ಹಾಗಾಗಿ, ನಾವು ಇದನ್ನು ಮೊದಲಿಗೆ ವೆಬ್ ಸರಣಿಯ ಮಾದರಿಯಲ್ಲಿ ನಿರ್ಮಿಸಲಿದ್ದೇವೆ. ಒಟ್ಟು 20 ಕಂತುಗಳ ವೆಬ್ ಸರಣಿ ಇದಾಗಿರಲಿದೆ. ಇದರ ಪ್ರಸಾರದ ವಿಚಾರವಾಗಿ ಎರಡು ಒಟಿಟಿ ವೇದಿಕೆಗಳ ಜೊತೆ ಮಾತುಕತೆ ನಡೆಯುತ್ತಿದೆ’ ಎಂದು ನಾಡಿಯಾಡ್‌ವಾಲಾ ಹೇಳಿದ್ದಾರೆ.

ವೆಬ್ ಸರಣಿಯ ಪಾತ್ರಧಾರಿಗಳನ್ನೇ ಇಟ್ಟುಕೊಂಡು ಸಿನಿಮಾ ಕೂಡ ನಿರ್ಮಾಣ ಮಾಡಲಾಗುವುದು. ಅದರ ಕೆಲಸಗಳೂ ವೆಬ್ ಸರಣಿಯ ಕೆಲಸಗಳ ಜೊತೆಯಲ್ಲೇ ಆರಂಭವಾಗಲಿವೆ ಎಂದು ಅವರು ತಿಳಿಸಿದ್ದಾರೆ. ‘ಈ ರೀತಿಯ ವೆಬ್ ಸರಣಿ, ಸಿನಿಮಾ ಇದೇ ಮೊದಲು. ಹಾಗಾಗಿ, ಕಥೆಗೆ ಅಗತ್ಯವಿದ್ದ ಅಧ್ಯಯನ, ಯೋಜನೆ ರೂಪಿಸುವುದು ಹಾಗೂ ಅದರ ಅನುಷ್ಠಾನ ಬಹಳ ದೀರ್ಘ ಸಮಯ ತೆಗೆದುಕೊಂಡವು’ ಎಂದಿದ್ದಾರೆ ನಾಡಿಯಾಡ್‌ವಾಲಾ. ಈ ವೆಬ್ ಸರಣಿಯ ಕಲಾವಿದರ ಹೆಸರುಗಳನ್ನು ಅಂತಿಮಗೊಳಿಸುವ ಕೆಲಸ ಸಾಗಿದೆಯಂತೆ. ಇದರ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ.

‘ನಾನಾ ಪಾಟೇಕರ್ ಅವರು ಕಾವ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತರ ಕಲಾವಿದರ ಜೊತೆ ಮಾತುಕತೆಗಳು ನಡೆದಿವೆ. ಯಾರು, ಯಾವ ಪಾತ್ರ ನಿಭಾಯಿಸಲಿದ್ದಾರೆ ಎಂಬುದರ ಘೋಷಣೆ ಸದ್ಯದಲ್ಲೇ ಹೊರಬೀಳಲಿದೆ’ ಎಂದು ತಿಳಿಸಿದ್ದಾರೆ.

ಕಾವ್ ಅವರು ಭಾರತದ ಭದ್ರತಾ ಮಹಾನಿರ್ದೇಶನಾಲಯದ ಸಂಸ್ಥಾಪಕರಲ್ಲಿ ಒಬ್ಬರು. ಅಷ್ಟೇ ಅಲ್ಲ, ಕಾವ್ ಅವರು ಭಾರತದ ತಾಂತ್ರಿಕ ಗುಪ್ತದಳ ‘ಏವಿಯೇಷನ್ ರಿಸರ್ಚ್ ಸೆಂಟರ್’ನ ಹಿಂದಿನ ಶಕ್ತಿ ಕೂಡ ಹೌದು.

ಗುಪ್ತದಳದಲ್ಲಿ (ಐ.ಬಿ) ಉಪ ನಿರ್ದೇಶಕ ಆಗಿದ್ದರು ಕಾವ್. ಅಂತರರಾಷ್ಟ್ರೀಯ ಬೆದರಿಕೆಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಇಂದಿರಾ ಗಾಂಧಿ ಅವರು ಐ.ಬಿ.ಯನ್ನು ಎರಡಾಗಿ ವಿಭಜಿಸಿ, ‘ರಾ’ ಸಂಸ್ಥೆಯನ್ನು ರಚಿಸಿದರು. ಆಗ ಕಾವ್ ಅವರು ಅದರ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಕಾವ್ ಅವರು ದೇಶದ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರಿಗೆ ಭದ್ರತಾ ಮುಖ್ಯಸ್ಥ ಕೂಡ ಆಗಿದ್ದರು.

ಈಗ ಇವರ ಜೀವನ ಆಧರಿಸಿ ಮೂಡಿಬರಲಿರುವ ವೆಬ್ ಸರಣಿಯು ನಿಜ ಜೀವನದ ಹಲವು ಘಟನೆಗಳಿಂದ ಸ್ಫೂರ್ತಿ ಪಡೆದಿದೆಯಂತೆ. ‘ರಾ ಸಂಸ್ಥೆಯ ಇತಿಹಾಸ, ಅದರ ಹುಟ್ಟಿನ ಕುರಿತು ಇದರಲ್ಲಿ ವಿವರ ಇರಲಿದೆ. ಕಾವ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಗಳ ಬಗ್ಗೆಯೂ ವಿವರ ಇರಲಿದೆ. ಭಾರತದ ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ರಾ ಸಂಸ್ಥೆಯು ವಿದೇಶಗಳಲ್ಲಿ ಮತ್ತು ಸ್ವದೇಶದಲ್ಲಿ ನಡೆಸಿದ ಹಲವು ಗುಪ್ತ ಕಾರ್ಯಾಚರಣೆಗಳು ಕಥೆಯ ಭಾಗ ಆಗಿರಲಿವೆ’ ಎಂದು ನಾಡಿಯಾಡ್‌ವಾಲಾ ಹೇಳಿದ್ದಾರೆ.

ವೆಬ್ ಸರಣಿಯ ಚಿತ್ರೀಕರಣವು ನವೆಂಬರ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ. ‘ಚಿತ್ರೀಕರಣದ ಸಂದರ್ಭದಲ್ಲಿ ಅತ್ಯಂತ ಹೆಚ್ಚಿನ ಮಟ್ಟದ ಜಾಗರೂಕತೆ ವಹಿಸಲಾಗುವುದು. ನಮ್ಮ ತಂಡದ ಸದಸ್ಯರ ಆರೋಗ್ಯ ನಮಗೆ ಮುಖ್ಯ’ ಎಂದು ಚಿತ್ರೀಕರಣ ತಂಡ ಹೇಳಿದೆ.

ಕಾವ್ ಅವರ ಬಗ್ಗೆ ಒಂದು ಸಿನಿಮಾ ಮಾಡುವುದಾಗಿ ಕರಣ್ ಜೋಹರ್ ಅವರು ಈ ವರ್ಷದ ಆರಂಭದಲ್ಲಿ ಹೇಳಿದ್ದರು. ನಿರ್ಮಾಪಕ ಸುನೀಲ್ ಬೊಹ್ರಾ ಅವರು ಕಾವ್ ಅವರ ಕುರಿತು ತಾವು ಒಂದು ಥ್ರಿಲ್ಲರ್ ವೆಬ್ ಸರಣಿ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ‘ಬೇರೆಯವರ ಜೊತೆ ನನ್ನ ವೆಬ್ ಸರಣಿ, ಸಿನಿಮಾದ ಹೋಲಿಕೆಯ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆ ಇಬ್ಬರು ನಿರ್ಮಾಪಕರಿಗೂ ಶುಭವಾಗಲಿ’ ಎಂದು ನಾಡಿಯಾಡ್‌ವಾಲಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.