ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ವಿಜ್ಞಾನ ಭವನದಲ್ಲಿ ಸೋಮವಾರ67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಖ್ಯಾತ ನಟ ರಜನಿಕಾಂತ್ ಅವರಿಗೆ 51ನೇ ʼದಾದಾಸಾಹೇಬ್ ಫಾಲ್ಕೆ ಪ್ರಶಸ್ತಿʼ ನೀಡಿ ಗೌರವಿಸಲಾಯಿತು.

ಭಾರತೀಯ ಸಿನಿಮಾದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರ ಹೆಸರಿನಲ್ಲಿ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.ರಜನಿಕಾಂತ್ ಅವರ ಜೀವಮಾನದಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಜನಿಕಾಂತ್, ‘ಪ್ರತಿಷ್ಠಿತ ಪ್ರಶಸ್ತಿಗಾಗಿ ಸರ್ಕಾರಕ್ಕೆ ನನ್ನ ಧನ್ಯವಾದಗಳು. ನನ್ನ ಗುರು, ಹಾಗೂ ಚಿತ್ರ ನಿರ್ದೇಶಕ ಕೆ.ಬಾಲಚಂದರ್ ಅವರಿಗೆ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ನನ್ನ ಸಹೋದರ ಸತ್ಯನಾರಾಯಣ ರಾವ್ ಅವರಿಗೆ ಧನ್ಯವಾದಗಳು’ಎಂದು ಹೇಳಿದರು.

‘ನನ್ನ ಸ್ನೇಹಿತ, ಚಾಲಕ ಮತ್ತು ಸಾರಿಗೆ ಸಹೋದ್ಯೋಗಿ ರಾಜ್ ಬಹದ್ದೂರ್ ಅವರು ನನ್ನಲ್ಲಿ ನಟನೆಯ ಪ್ರತಿಭೆಯನ್ನು ಗುರುತಿಸಿದರು ಮತ್ತು ನನ್ನನ್ನು ಚಿತ್ರರಂಗಕ್ಕೆ ಸೇರುವಂತೆ ಪ್ರೋತ್ಸಾಹಿಸಿದರು. ನನ್ನ ಸಿನಿಮಾಗಳನ್ನು ನಿರ್ಮಿಸಿದ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಕಲಾವಿದರು, ವಿತರಕರು, ಮಾಧ್ಯಮದವರು, ನನ್ನ ಎಲ್ಲಾ ಅಭಿಮಾನಿಗಳು, ಮತ್ತು ತಮಿಳು ಜನರಿಗೆ ಧನ್ಯವಾದಗಳು’ ಎಂದರು.

2019ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನುಮಾರ್ಚ್‌ನಲ್ಲೇಘೋಷಿಸಲಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿತ್ತು.

ತಮಿಳು ನಟ ಧನುಷ್ ಮತ್ತು ಹಿಂದಿಯ ಮನೋಜ್ ಬಾಜಪೇಯಿ ಅವರು ಕ್ರಮವಾಗಿʼಅಸುರನ್ʼ ಹಾಗೂ ʼಭೋನ್ಸ್ಲೇʼ ಸಿನಿಮಾದಲ್ಲಿನ ನಟನೆಗಾಗಿ ʼಅತ್ಯುತ್ತಮ ನಟʼ ಪ್ರಶಸ್ತಿ ಪಡೆದಿದ್ದಾರೆ.ಹಾಗೆಯೇ ಬಾಲಿವುಡ್ ನಟಿ ಕಂಗನಾ ರನೌತ್ ʼಮಣಿಕರ್ಣಿಕಾʼ, ʼಪಂಗಾʼ ಚಿತ್ರಗಳಲ್ಲಿನ ಅಭಿನಯಕ್ಕಾಗಿ ʼಅತ್ಯುತ್ತಮ ನಟಿʼ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.