ನವದೆಹಲಿ: ಎರಡು ಚಲನಚಿತ್ರ ನಿರ್ಮಾಣ ಕಂಪನಿಗಳು, ಎರಡು ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಮತ್ತು ಪ್ರಮುಖ ನಟಿಯ ಮನೆ ಮತ್ತು ಸಂಬಂಧಿತ ಪ್ರದೇಶಗಳಲ್ಲಿ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ನಂತರ ₹ 650 ಕೋಟಿ ಆರ್ಥಿಕ ಅಕ್ರಮಗಳನ್ನು ಪತ್ತೆ ಮಾಡಿರುವುದಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ ಗುರುವಾರ ಹೇಳಿದೆ. ಆದರೆ, ಈ ಬಗ್ಗೆ ನಿರ್ದಿಷ್ಟವಾಗಿ ಯಾವುದೇ ಹೆಸರುಗಳನ್ನು ಅವರು ಉಲ್ಲೇಖಿಸಿಲ್ಲ.

ಬಾಲಿವುಡ್ ನಟ ತಾಪ್ಸಿ ಪನ್ನು, ಫ್ಯಾಂಟಮ್ ಫಿಲ್ಮ್ ಕಂಪನಿ ಸ್ಥಾಪಕರಾದ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ಅವರ ಪಾಲುದಾರರ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ಬಳಿಕ ಸಿಬಿಡಿಟಿ ಈ ಹೇಳಿಕೆ ಬಿಡುಗಡೆ ಮಾಡಿದೆ. ಎರಡನೇ ದಿನವೂ ಮುಂಬೈ, ಪುಣೆ ಮತ್ತು ಹೈದರಾಬಾದ್ನಲ್ಲಿ ದಾಳಿ ಮುಂದುವರೆದಿತ್ತು. ಸೆಲೆಬ್ರಿಟಿ ಮತ್ತು ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳಾದ ಕ್ವಾನ್ ಮತ್ತು ಎಕ್ಸೈಡ್ನ ಕೆಲವು ಕಾರ್ಯನಿರ್ವಾಹಕರ ಮನೆಗಳ ಮೇಲೂ ದಾಳಿ ನಡೆದಿದೆ.

ದಾಳಿ ಆರಂಭವಾದ ಒಂದು ದಿನದ ನಂತರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಿಬಿಡಿಟಿ, ಯಾರೊಬ್ಬರ ಅಥವಾ ಕಂಪನಿಗಳನ್ನು ಹೆಸರಿಸದೆ, ಮುಖ್ಯವಾಗಿ ಚಲನಚಿತ್ರಗಳು, ವೆಬ್ ಸರಣಿಗಳು, ನಟನೆ, ನಿರ್ದೇಶನ ವಲಯದ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ. ಸೆಲೆಬ್ರಿಟಿಗಳು ಮತ್ತು ಇತರ ಕಲಾವಿದರ ಪ್ರತಿಭೆ ನಿರ್ವಹಣೆಯ ವ್ಯವಹಾರದಲ್ಲಿ ತೊಡಗಿಕೊಂಡಿರುವ ಕಂಪನಿಗಳ ಮೇಲೂ ದಾಳಿ ನಡೆದಿರುವುದಾಗಿ ಹೇಳಿದೆ.

ಅಧಿಕೃತ ಮೂಲಗಳ ಪ್ರಕಾರ, ನಟಿ ತಾಪ್ಸಿ ಪನ್ನು ಮತ್ತು ಫ್ಯಾಂಟಮ್ ಫಿಲ್ಮ್ಸ್ ಸಂಸ್ಥೆಯ ನಾಲ್ಕು ಮಾಜಿ ಪ್ರಮೋಟರ್ಗಳಾದ ಕಶ್ಯಪ್, ನಿರ್ದೇಶಕ-ನಿರ್ಮಾಪಕ ವಿಕ್ರಮಾದಿತ್ಯ ಮೋಟ್ವಾನೆ, ನಿರ್ಮಾಪಕ ವಿಕಾಸ್ ಬಹ್ಲ್ ಮತ್ತು ನಿರ್ಮಾಪಕ-ವಿತರಕ ಮಧು ಮಂತೇನಾ ಮನೆ ಮೇಲೆ ದಾಳಿ ನಡೆದಿದೆ. ಸೆಲೆಬ್ರಿಟಿ ಮತ್ತು ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳಾದ ಕ್ವಾನ್ ಮತ್ತು ಎಕ್ಸೈಡ್ ಮೆಲೆ ದಾಳಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.