ಕೃಷ್ಣ ನಿರ್ದೇಶನದ ನಟ ಸುದೀಪ್ ನಾಯಕ ನಟರಾಗಿರುವ ‘ಪೈಲ್ವಾನ್’ ಚಿತ್ರ ಕನ್ನಡ ಸೇರಿದಂತೆ ಎಂಟು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆಗಸ್ಟ್ ಮೊದಲ ವಾರದಲ್ಲಿಯೇ ಪೈಲ್ವಾನ್ ಅಖಾಡಕ್ಕೆ ಇಳಿಯಬೇಕಿತ್ತು.

ಚಿತ್ರದಲ್ಲಿ 1 ಗಂಟೆ 40 ನಿಮಿಷದಷ್ಟು ಗ್ರಾಫಿಕ್ಸ್ ಇದೆಯಂತೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯು ಈ ಕೆಲಸದ ಜವಾಬ್ದಾರಿ ಹೊತ್ತಿದೆ. ಹಾಗಾಗಿ, ಚಿತ್ರದ ಬಿಡುಗಡೆಗೆ ವಿಳಂಬವಾಗಿದೆ. ಆಗಸ್ಟ್ ಅಂತ್ಯದಲ್ಲಿ ಪೈಲ್ವಾನ್ ಜನರ ಮುಂದೆ ಬರುವುದು ನಿಶ್ಚಿತ ಎನ್ನುವುದು ಚಿತ್ರತಂಡದ ಭರವಸೆ.

‘ಪೈಲ್ವಾನ್’ ಚಿತ್ರದ ‘ಬಂದ ನೋಡು ಪೈಲ್ವಾನ್’ ಹಾಡು ಬಿಡುಗಡೆಯಾಗಿದ್ದು, ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಚಿತ್ರತಂಡ ಖುಷಿಯನ್ನು ಹೆಚ್ಚಿಸಿದೆ. ಈ ಸಂತಸದ ನಡುವೆಯೇ ಚಿತ್ರದುರ್ಗದಲ್ಲಿ ಇದೇ 27ರಂದು ಆಡಿಯೊ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಚಿತ್ರದಲ್ಲಿ ಆರು ಹಾಡುಗಳು ಮತ್ತು ಎರಡು ಥೀಮ್ ಸಾಂಗ್ಗಳಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

‘ಲಹರಿ ಸಂಸ್ಥೆಯು ಆಡಿಯೊ ಹಕ್ಕು ಖರೀದಿಸಿದೆ. ಆಡಿಯೊ ಬಿಡುಗಡೆಯ ಬಳಿಕ ಎಲ್ಲ ಭಾಷೆಗಳಲ್ಲೂ ಟ್ರೇಲರ್ಗಳನ್ನು ಬಿಡುಗಡೆ ಮಾಡಲಾಗುವುದು. ಇದಕ್ಕೆ ನಿಮ್ಮೆಲ್ಲರ ಪ್ರೀತಿ, ಸಹಕಾರ ಇರಲಿ’ ಎಂದು ಚಿತ್ರದ ನಿರ್ದೇಶಕ ಕೃಷ್ಣ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.