ಗೋವಿಂದಾಯ ನಮಃ ಚಿತ್ರದ ‘ಪ್ಯಾರ್ ಗೆ ಆಗ್ಬುಟೈತೇ....’ ಹಾಡಿನ ಮೂಲಕ ಸಿನಿರಸಿಕರ ಮನಸೆಳೆದ ಪಾರೂಲ್ ಯಾದವ್ ಅವರಿಗೆ ಈಗ ‘ಬಟರ್ ಫ್ಲೈ’ ಮೇಲೆ ಪ್ಯಾರ್ ಆಗಿದೆಯಂತೆ.!

ಹೌದು, ಬಟರ್ಫ್ಲೈ ಇಲ್ಲಿ ಬರೀ ಚಿಟ್ಟೆಯಲ್ಲ, ಬದಲಿಗೆ ಪಾರುಲ್ ನಾಯಕ ನಟಿಯಾಗಿ ಅಭಿನಯಿಸುತ್ತಿರುವ ಹೊಸ ಚಿತ್ರ. ಈ ಹಿಂದೆಸೀಸರ್ ಚಿತ್ರದಲ್ಲಿ ನಟಿಸಿದ್ದ ಪಾರುಲ್ಗೆ ಅದು ಅಷ್ಟೇನು ಹೆಸರು ತಂದುಕೊಡಲಿಲ್ಲ. ಹೀಗಾಗಿ, ದೊಡ್ಡ ಬ್ರೇಕ್ಗೆ ಕಾಯುತ್ತಿರುವ ಅವರು ‘ಬಟರ್ಫ್ಲೈ’ ಆಗಿ ಮೋಡಿ ಮಾಡಲು ಹಾರಿ ಬರುತ್ತಿದ್ದಾರೆ.

ರಮೇಶ್ ಅರವಿಂದ ನಿರ್ದೇಶನದ ಈ ಚಿತ್ರದಲ್ಲಿ ಪಾರುಲ್ ಅವರದ್ದು, ಗೋಕರ್ಣದ ಹುಡುಗಿ ಪಾರ್ವತಿ ಪಾತ್ರ. ನಗುನಗುತ್ತಾ ಬಿಂದಾಸ್ ಆಗಿ ಕುಣಿದು ಕುಪ್ಪಳಿಸುವ ಪಾತ್ರವದು. ನಗುವಿನ ಜೊತೆಗೆ ಕಣ್ಣೀರು ತರಿಸುವ ಸನ್ನಿವೇಶಗಳು ಚಿತ್ರದಲ್ಲಿವೆ ಎನ್ನಲಾಗಿದೆ.

ಕಲರ್ಫುಲ್ ಆಗಿ ಕಾಣುವ ಪಾರುಲ್ಮುಗ್ಧ ಹುಡುಗಿಯಾಗಿ, ಚೆಂದವಾಗಿ ನಗುತ್ತಿದ್ದಾಳೆ ಪೋಸ್ಟರ್ನಲ್ಲಿ. ಆಕೆಯ ಉಡುಪಿನ ಶೈಲಿ, ಬಣ್ಣ ಬಣ್ಣದ ಚಿಟ್ಟೆಗಳಂತೆ ಆಕೆಯೂ ಕುಣಿಯುತ್ತಿರುವ ಚಿತ್ರ, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಚಿತ್ರದ ಫಸ್ಟ್ ಲುಕ್ ಅನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ‘ನನ್ನ ವೃತ್ತಿಬದುಕಿನ ಅತ್ಯುತ್ತಮ ಅನುಭವ….. ನಾನು ಜೀವಿಸಿರುವ ಪಾತ್ರ…. ಹೊತ್ತು ಬರುತ್ತಿದ್ದೇನೆ…. ನನ್ನ ಚಿತ್ರ ಬಟರ್ ಫ್ಲೈ’ ಅಂತ ಅವರು ಬರೆದುಕೊಂಡಿದ್ದಾರೆ.

ಬಾಲಿವುಡ್ನ ನಟಿ ಕಂಗನಾ ರನೋಟ್ ಅಭಿನಯದ ಹಿಂದಿಯ ‘ಕ್ವೀನ್’ ಚಿತ್ರದ ರಿಮೇಕ್ ವರ್ಷನ್ ಈ ‘ಬಟರ್ಫ್ಲೈ’. ರಿಮೇಕ್ ಆದರೂ ವಿಭಿನ್ನವಾಗಿ ತೆರೆಗೆ ತರುವ ರಮೇಶ್ ಅರವಿಂದ ಈ ಚಿತ್ರವನ್ನು ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಿ ಭಾಷೆಯಲ್ಲಿ ಸಿದ್ಧಪಡಿಸುತ್ತಿದ್ದಾರೆ. ಅಲ್ಲದೇ ಏಕಕಾಲದಲ್ಲಿ ಎಲ್ಲ ಭಾಷೆಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರಂತೆ.

ಮನು ಕುಮಾರನ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ನಾಯಕಿಯ ಪಾತ್ರದ ಜೊತೆಗೆ ಪಾರುಲ್ ಸಹ ನಿರ್ಮಾಪಕಿಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸತ್ಯ ಹೆಗ್ಡೆ ಕ್ಯಾಮರಾ ವರ್ಕ್ ಚಿತ್ರಕ್ಕಿದೆ.

ಇದೇ ಮೊದಲ ಬಾರಿಗೆ ಬಾಲಿವುಡ್ನಖ್ಯಾತ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಅವರು ಈ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದು, ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಅಂದಹಾಗೇ ಈ ಸಿನಿಮಾನವೆಂಬರ್ನಲ್ಲಿ ಬಿಡುಗಡೆಗೊಳ್ಳಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.