ಬೆಂಗಳೂರು:ಕನ್ನಡ ಚಿತ್ರರಂಗದ ನಿರ್ಮಾಪಕಿ, ಹೆಮ್ಮೆಯ ಕನ್ನಡತಿ ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ಅವರ 80ನೇ ವರ್ಷದ ಹುಟ್ಟುಹಬ್ಬ(ಡಿ.6).

ಜನ್ಮ ಕೊಟ್ಟ ಅಮ್ಮನ ಜನುಮದಿನ. ಈ ಜನ್ಮದಲ್ಲಿ ಈ ಪಾರ್ವತಿ ಪುತ್ರನಾಗಲು ಪುಣ್ಯ ಮಾಡಿದ್ದೆ ... miss you ಅಮ್ಮ ಎಂದು ನಟ ಶಿವರಾಜ್ ಕುಮಾರ್ ಟ್ವೀಟ್ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಅಮ್ಮಾ ಎಂದಿಂಗೂ ನೀನು ನನ್ನ ಶಕ್ತಿ ಎಂದು ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ.

ವಜ್ರೇಶ್ವರಿ ಚಿತ್ರ ನಿರ್ಮಾಣ ಸಂಸ್ಥೆಯ ಮೂಲಕ ಪಾರ್ವತಮ್ಮ ರಾಜ್ಕುಮಾರ್ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. ಅವರುನಿರ್ಮಿಸಿದ ಮೊದಲ ಚಿತ್ರ ‘ತ್ರಿಮೂರ್ತಿ’. ‘ಹಾಲು ಜೇನು’, ‘ಕವಿರತ್ನ ಕಾಳಿದಾಸ’, ‘ಜೀವನ ಚೈತ್ರ’ ಸೇರಿದಂತೆ ಸುಮಾರು 80 ಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ.

ಮೈಸೂರಿನಲ್ಲಿ ಶಕ್ತಿಧಾಮ ಅಬಲಾಶ್ರಮವನ್ನು ಸ್ಥಾಪನೆ ಮಾಡಿದ್ದು ಅಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಮಹಿಳೆಯರಿಗೆ ವಸತಿ ಸೌಕರ್ಯವನ್ನು ಕಲ್ಪಿಸಿದ್ದಾರೆ.

ಪಾರ್ವತಮ್ಮ ಅವರು1939ರಲ್ಲಿ ಮೈಸೂರು ಜಿಲ್ಲೆ ಸಾಲಿಗ್ರಾಮದಲ್ಲಿ ಜನಿಸಿದ್ದರು. 1953ರಲ್ಲಿ ರಾಜ್ಕುಮಾರ್ ಅವರೊಂದಿಗೆ ಪಾರ್ವತಮ್ಮ ಅವರ ವಿವಾಹವಾಗಿತ್ತು. 2017ರ ಮೇ 31ರಂದು ಪಾರ್ವತಮ್ಮ ರಾಜ್ಕುಮಾರ್ ಬಹುಅಂಗಾಂಗ ವೈಫಲ್ಯದಿಂದ ನಿಧನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.