ನವದೆಹಲಿ/ ಮುಂಬೈ: ಬಾಲಿವುಡ್ ಬಾದ್ಶಾ ಶಾರೂಕ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಸಿನಿಮಾ ಬುಧವಾರ 5000 ಚಿತ್ರಮಂದಿರಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ. ಕೆಲವೆಡೆ ಪ್ರತಿಭಟನೆಗಳೂ ನಡೆದಿವೆ.

ದೆಹಲಿ, ಮುಂಬೈನಂತಹ ಮಹಾನಗರಗಳಲ್ಲಿ ಬೆಳಿಗ್ಗೆ 6 ಮತ್ತು 7 ಗಂಟೆಯ ಪ್ರದರ್ಶನಗಳನ್ನು ಏರ್ಪಡಿಸಿದ್ದಲ್ಲದೇ, ಬುಧವಾರ ರಾತ್ರಿ 12.30ಕ್ಕೂ ಯಶ್ ರಾಜ್ ಫಿಲ್ಮ್ಸ್ ಪ್ರದರ್ಶನ ಏರ್ಪಡಿಸಿತ್ತು. ವಿಶ್ವದಾದ್ಯಂತ ಒಟ್ಟು 8,500 ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿರುವ ಪಠಾಣ್ಗೆ ಈ ಹಿಂದೆ ಯಾವ ಹಿಂದಿ ಸಿನಿಮಾಗೂ ಸಿಗದ ಭರ್ಜರಿ ಆರಂಭ ದೊರೆತಿದೆ ಎನ್ನಲಾಗುತ್ತಿದೆ.

ಕೆಲ ಪ್ರದೇಶಗಳಲ್ಲಿ ಮುಂಜಾನೆಯ ಪ್ರದರ್ಶನ ಹೌಸ್ಫುಲ್ ಆಗಿದ್ದರೆ, ಇನ್ನು ಕೆಲವೆಡೆ ಪ್ರದರ್ಶನ ರದ್ದು ಮಾಡಲಾಗಿದೆ. ಚಿತ್ರವು ಮೊದಲ ದಿನ ₹45 ಕೋಟಿ ಸಂಗ್ರಹ ಮಾಡಿರಬಹುದು ಎಂದು ಅಂದಾಜು ಹಾಕಲಾಗಿದೆ.

ಕೋಲ್ಕತ್ತಾದಲ್ಲಿ ಚಿತ್ರದ ಪೋಸ್ಟರ್ಗೆ ಚಾಕೊಲೇಟ್ ಕೇಕ್ ತಿನ್ನಿಸುವ ಮೂಲಕ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರೆ, ಗುವಾಹಟಿಯಲ್ಲಿ ಚಿತ್ರದ ಜಾಹೀರಾತು ಫಲಕಗಳ ಮೇಲೆ ಹಾಲನ್ನು ಸುರಿದು ಅಭಿಮಾನ ಮೆರೆದಿದ್ದಾರೆ. ಕೆಲ ಪ್ರದೇಶಗಳಲ್ಲಿ ಚಿತ್ರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿತು. ಮಧ್ಯಪ್ರದೇಶದ, ಭೋಪಾಲ್, ಪಟ್ನಾ, ಇಂದೋರ್ ಮತ್ತು ಗ್ವಾಲಿಯರ್ನ ಕೆಲವು ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನಗಳನ್ನು ರದ್ದುಗೊಳಿಸಲಾಯಿತು, ಪೋಸ್ಟರ್ಗಳನ್ನು ಹರಿದು ಹಾಕಿ ಪ್ರತಿಭಟನೆ ನಡೆಸಲಾಯಿತು. ಚಿತ್ರಮಂದಿರದ ಹೊರಗೆ ಹನುಮಾನ್ ಚಾಲೀಸ್ ಹೇಳಿ ಪ್ರತಿಭಟನೆಯನ್ನೂ ನಡೆಸಲಾಯಿತು.

ಸಿದ್ಧಾರ್ಥ್ ಆನಂದ್ ನಿರ್ದೇಶಿಸಿರುವ ಈ ಚಿತ್ರದ ‘ಬೆಷರಾಮ್..’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ ವಿವಾದಕ್ಕೆ ಕಾರಣವಾಗಿ, ಚಿತ್ರವನ್ನು ನಿಷೇಧಿಸಬೇಕೆಂದು ಆಗ್ರಹಿಸುವ ಮಟ್ಟಿಗೆ ಗಲಭೆ ಸೃಷ್ಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.