ಬೆಂಗಳೂರು: ಭಾರೀ ನಿರೀಕ್ಷೆ ಹುಟ್ಟಿಸಿರುವ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‘ ಸಿನಿಮಾ ಬಿಡುಗಡೆಗೂ ಮುನ್ನವೇ ಸೋರಿಕೆಯಾಗಿದ್ದು, ಅಂತರಜಾಲದಲ್ಲಿ ಸಿನಿಮಾ ಲಭ್ಯವಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಜನವರಿ 25 ರಂದು ಸಿನಿಮಾ ಬಿಡುಗಡೆಯಾಗಿದ್ದು, ಅದಕ್ಕೂ ಮುನ್ನವೇ Filmyzilla ಹಾಗೂ Filmy4wap ಎನ್ನುವ ವೆಬ್ಸೈಟ್ಗಳಲ್ಲಿ ಸಿನಿಮಾ ಸೋರಿಕೆಯಾಗಿದೆ.

ಪೈರಸಿ ಬಗ್ಗೆ ಸಿನಿಮಾ ತಂಡ ದೂರು ನೀಡಿದ್ದರೂ ಕೂಡ, ಅಕ್ರಮವಾಗಿ ಸಿನಿಮಾ ವೆಬ್ಸೈಟ್ಗಳಲ್ಲಿ ಲಭ್ಯವಿರುವುದು ಸಿನಿಮಾ ತಂಡಕ್ಕೆ ಹಿನ್ನಡೆಯಾಗಿದೆ.

ಇದೇ ವೇಳೆ ಸಿನಿಮಾವನ್ನು ಚಿತ್ರ ಮಂದಿರಗಳಲ್ಲಿಯೇ ವೀಕ್ಷಣೆ ಮಾಡಿ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಅಭಿಮಾನಿಗಳಲ್ಲಿ ಮನವಿ ಮಾಡಿದೆ.

‘ದೊಡ್ಡ ಚಮತ್ಕಾರಕ್ಕೆ ನೀವೆಲ್ಲಾ ಸಿದ್ಧರಾಗಿದ್ದೀರಾ? ಸಿನಿಮಾದ ವಿಡಿಯೊಗಳನ್ನು ಚಿತ್ರೀಕರಿಸಿ, ಅವುಗಳನ್ನು ಆನ್ಲೈನ್ನಲ್ಲಿ ಹಂಚುವುದು ಅಥವಾ ಅವುಗಳನ್ನು ಕಿಡಿಗೇಡಿಗಳಿಗೆ ನೀಡುವುದರಿಂದ ದೂರ ಇರಿ ಎಂದು ಎಲ್ಲರಲ್ಲಿಯೂ ವಿನಮ್ರ ವಿನಂತಿ‘ ಎಂದು ಟ್ವೀಟ್ ಮಾಡಿದೆ.

ಬಿಡುಗಡೆಗೂ ಮುನ್ನ ಚಿತ್ರ ದಾಖಲೆ ಬರೆದಿದ್ದು, ಮೊದಲ ದಿನದ ಪ್ರದರ್ಶನಕ್ಕೆ 5 ಲಕ್ಷಕ್ಕಿಂತ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.