‘ಬೇಷರಮ್ ರಂಗ್’ ಹಾಡಿನಿಂದ ವಿವಾದಕ್ಕೆ ಗುರಿಯಾಗಿದ್ದ ಶಾರುಖ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ‘ಪಠಾಣ್’ ಚಿತ್ರ ಇಂದು ತೆರೆ ಕಂಡಿದೆ. ಕೇಸರಿ ಪಡೆಯ ಬಾಯ್ಕಾಟ್ ಬೆದರಿಕೆ, ಪ್ರತಿಭಟನೆ, ಹನುಮಾನ್ ಚಾಲೀಸ್ ಪಠಣದ ನಡುವೆಯೂ ‘ಪಠಾಣ್’ ಚಿತ್ರದ ಅಬ್ಬರ ಜೋರಾಗಿದೆ. ಬಹುತೇಕ ನೆಟ್ಟಿಗರು ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಬಾಲಿವುಡ್ ಚಿತ್ರ ವಿಮರ್ಶಕ ತರಣ್ ಆದರ್ಶ್, ಚಿತ್ರವನ್ನು ಒಂದೇ ಸಾಲಿನಲ್ಲಿ ಬ್ಲಾಕ್ಬಸ್ಟರ್ ಎಂದು ಬಣ್ಣಿಸಿದ್ದಾರೆ.

ಸುದೀರ್ಘ ವಿರಾಮದ ಬಳಿಕ ಶಾರುಖ್ ಖಾನ್ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದು, ಭರ್ಜರಿ ಆ್ಯಕ್ಷನ್ನೊಂದಿಗೆ ಅಭಿಮಾನಿಗಳ ಮನ ಗೆದ್ದಿದ್ದಾರೆ ಎನ್ನುತ್ತಿದ್ದಾರೆ ಬಹುತೇಕ ನೆಟ್ಟಿಗರು.

ಇತ್ತೀಚಿನ ಅತ್ಯುತ್ತಮ ಆ್ಯಕ್ಷನ್ ಸಿನಿಮಾ. ಅತಿಥಿ ಪಾತ್ರದಲ್ಲಿ ಸಲ್ಮಾನ್ ಖಾನ್ ಬರುವುದು ಪ್ರೇಕ್ಷಕರ ಕಣ್ಣಿಗೆ ಹಬ್ಬ. ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಥೆ ಕೂಡ ಉತ್ತಮವಾಗಿದೆ. ಖಂಡಿತ ನೋಡಲೇಬೇಕಾದ ಚಿತ್ರವೆಂದು ಟ್ವಿಟ್ಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ಚಿತ್ರಕ್ಕೆ ನಾಲ್ಕೂವರೆ ರೇಟಿಂಗ್ ನೀಡಿರುವ ತರಣ್, ಮೊದಲ ದಿನವೇ ಚಿತ್ರ ₹20ಕೋಟಿ ಗಳಿಕೆ ದಾಟಿದೆ ಎಂದು ಟ್ವೀಟ್ ಮಾಡಿದ್ದಾರೆ. ರಾಜಸ್ತಾನದಲ್ಲಿ ಟಿಕೆಟ್ ದರ ₹2400. ಆದಾಗ್ಯೂ ಚಿತ್ರಮಂದಿರ ಭರ್ತಿಯಾಗಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಹಲವರು ಮೊದಲ ದಿನ ಮೊದಲ ಶೋ ಟಿಕೆಟ್ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಬಾಯ್ಕಾಟ್ ಮಾಡಿರುವವರನ್ನು ವ್ಯಂಗ್ಯವಾಡಿರುವ ನಟ ಪ್ರಕಾಶ್ ರಾಜ್, ಕಿಂಗ್ ಖಾನ್ ಮರಳಿ ಬಂದಿದ್ದಾರೆ. ದೀಪಿಕಾ ಮತ್ತು ಇಡೀ ತಂಡ ಹೀಗೆಯೇ ಘರ್ಜಿಸಿ ಎಂದು ಶುಭ ಹಾರೈಸಿದ್ದಾರೆ.

ಚಿತ್ರದ ‘ಬೇಷರಮ್ ರಂಗ್’ ಹಾಡು ಕೇಸರಿ ಪಡೆಯನ್ನು ಕೆರಳಿಸಿತ್ತು. ದೀಪಿಕಾ ಪಡುಕೋಣೆ ಈ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ತೊಟ್ಟು ಒಂದು ಗುಂಪಿನ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಕೂಗು ಕೇಳಿ ಬಂದಿತ್ತು. ಬಾಯ್ಕಾಟ್ ಪಠಾಣ್, ಚಿತ್ರ ಬಿಡುಗಡೆಯಾದರೆ ಚಿತ್ರಮಂದಿರಕ್ಕೆ ಬೆಂಕಿ ಇಡಲಾಗುವುದು ಇತ್ಯಾದಿ ಬೆದರಿಕೆಗಳನ್ನು ಚಿತ್ರತಂಡ ಎದುರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.