ಮುಂಬೈ: ಹಿಂದಿಯ ಕಿರುತೆರೆ ನಟಿಕಾನಿಷ್ಕಾ ಸೋನಿಸ್ವಯಂ ವಿವಾಹವಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅವರು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮ ಇನ್ಸ್ಟ್ರಾಂನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ವಿವಾಹವಾಗಲು ಗಂಡಿನ ಅಗತ್ಯವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೂಲಕಕಾನಿಷ್ಕಾ ಸೋನಿ ಸ್ವಯಂ ವಿವಾಹವಾದ (ಸೋಲೊಗಮಿ) ಎರಡನೇ ಮಹಿಳೆ ಎನಿಸಿಕೊಂಡಿದ್ದಾರೆ.

ನಾನು ಸ್ವಯಂ ಮದುವೆಯಾಗಿದ್ದು ನನ್ನ ಎಲ್ಲಾ ಕನಸುಗಳನ್ನು ನನಸು ಮಾಡಿಕೊಂಡಿದ್ದೇನೆ. ಇನ್ನು ನನ್ನನ್ನು ಮಾತ್ರ ಪ್ರೀತಿಸುತ್ತೇನೆ. ಮುಂದೆ ನನಗೆ ಪುರುಷನ ಅಗತ್ಯ ಇರುವುದಿಲ್ಲ. ಏಕಾಂಗಿಯಾಗಿ ನಾನು ಸುಖ ಜೀವನ ನಡೆಸಲಿದ್ದೇನೆ. ನನ್ನಲ್ಲಿ ಶಿವ ಮತ್ತು ಶಕ್ತಿ ಇಬ್ಬರು ಇದ್ದಾರೆ ಎಂದು ಸೋನಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಸ್ವಯಂ ವಿವಾಹವಾದ ಕ್ಷಮಾ ಬಿಂದು: ವಿರೋಧ ವ್ಯಕ್ತವಾದ್ದರಿಂದ 2 ದಿನ ಮೊದಲೇ ಮದುವೆ

ಸೋನಿ ಅವರ ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇದು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ಸೋನಿ ಅವರನ್ನು ಬೈದು ಕಮೆಂಟ್ಗಳನ್ನು ಮಾಡುತ್ತಿದ್ದಾರೆ.

ಮುಂಬೈನಲ್ಲಿ ನೆಲೆಸಿರುವ ಕಾನಿಷ್ಕಾ ಸೋನಿ ಧಾರಾವಾಹಿ, ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಪವಿತ್ರಾ ರಿಷ್ತಾ' ಧಾರಾವಾಹಿ ಮೂಲಕ ಅವರು ಹೆಚ್ಚು ಖ್ಯಾತಿ ಪಡೆದಿದ್ದಾರೆ. 2007ರಿಂದ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.34 ವರ್ಷದ ಕಾನಿಷ್ಕಾ ಸೋನಿಯ ಈ ನಡೆಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇದನ್ನು ವಿರೋಧಿಸಿದ್ದಾರೆ.

ಇದನ್ನೂ ಓದಿ:ರವಿಚಂದ್ರನ್ ಪುತ್ರನ ಕಲ್ಯಾಣ: ಸಂಗೀತಾ ಜೊತೆ ಸಪ್ತಪದಿ ತುಳಿದ ಮನು

ಕೆಲವು ತಿಂಗಳುಗಳ ಹಿಂದಷ್ಟೇ ಗುಜರಾತಿನ ಯುವತಿ ಕ್ಷಮಾ ಬಿಂದು ಸ್ವಯಂ ವಿವಾಹವಾಗಿದ್ದರು. ಈ ಘಟನೆ ದೇಶದಲ್ಲಿ ಸಂಚಲನ ಮುಡಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ವಾದ-ವಿವಾದಗಳು ನಡೆದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.