ಸಹಜೀವನ ಸಂಬಂಧದ ಕುರಿತಾದ ಕಥೆ ಹೇಳುತ್ತಿದೆ ‘ಪ್ರೇಮಿಗಳ ಗಮನಕ್ಕೆ’. ಬೆಂಗಳೂರಿನಂಥ ನಗರಗಳಲ್ಲಿ ವಾಸಿಸುವ ಉದ್ಯೋಗಿಗಳಲ್ಲಿ ಈ ಸಂಬಂಧ ಹೆಚ್ಚು ಕಾಣಬಹುದು.

ಕೋವಿಡ್ ಕಾಲದಲ್ಲಿ ಇಡೀ ದೇಶದಾದ್ಯಂತ ಲಾಕ್‌ಡೌನ್ ಆಗಿದ್ದ ಸಂದರ್ಭ ಬೆಂಗಳೂರಿನ ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸಲು ಶುರು ಮಾಡಿದರು. ಈ ಚಿತ್ರದ ನಾಯಕ– ನಾಯಕಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರಿಬ್ಬರೂ ಒಂದೇ ಮನೆಯಲ್ಲಿ ವಾಸಿಸಲು ತೊಡಗಿದಾಗ ಬರುವ ಸನ್ನಿವೇಶಗಳೇನು? ಅದನ್ನೆಲ್ಲಾ ಅವರು ಹೇಗೆ ಎದುರಿಸಿದರು ಎಂಬ ಬಗ್ಗೆ ಈ ಚಿತ್ರ ಮಾತನಾಡಿದೆ. ಚಿತ್ರವನ್ನು ಬೆಂಗಳೂರಿನ ಉತ್ತರಹಳ್ಳಿಯ ಮನೆಯೊಂದರಲ್ಲಿ ಚಿತ್ರೀಕರಿಸಲಾಗಿದೆ. ಮಾತು ಮತ್ತು ಎರಡು ಹಾಡುಗಳ ಚಿತ್ರೀಕರಣ ನಡೆದಿದೆ. ಒಂದು ಹಾಡನ್ನು ಮಂಗಳೂರಿನಲ್ಲಿ ಚಿತ್ರೀಕರಿಸಬೇಕಿದೆ. ಜುಲೈ – ಆಗಸ್ಟ್ ವೇಳೆ ಈ ಚಿತ್ರ ತೆರೆಗೆ ಬರಲಿದೆ ಎಂದಿದೆ ಚಿತ್ರತಂಡ. ಕನ್ನಡ ಬಿಗ್ ಬಾಸ್ ಖ್ಯಾತಿಯ ಶಶಿ ಈ ಚಿತ್ರದ ನಾಯಕ. ಚಿರಶ್ರೀ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸುಬ್ಬು ಮುಂತಾದವರು ತಾರಾಗಣದಲ್ಲಿದ್ದಾರೆ.

ವಿನ್ಸೆಂಟ್ ಇನ್ಬರಾಜ್ ಅವರು ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅರುಳ್ ಸೆಲ್ವನ್ ಅವರ ಛಾಯಾಗ್ರಹಣ, ಡೆನ್ನಿಸ್ ವಲ್ಲಭನ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಚಿತ್ರದ ಸಹ ನಿರ್ದೇಶಕರಾಗಿ ಕೃಷ್ಣ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಸಿಟಾಡಿಲ್ ಫಿಲಂಸ್ ಮೂಲಕ ಸುಬ್ಬು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.