ಬೆಂಗಳೂರು: ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕರಾಗಿ ನಟಿಸಿರುವ ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಸಿನಿಮಾದಲ್ಲಿ ಚಿತ್ರಕಲಾವಿದೆಯಾಗಿ ವಿಶೇಷ ಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ನಟಿಸಿದ್ದಾರೆ.

ಆಂಗ್ಲೋ ಇಂಡಿಯನ್ ಆಗಿ ಕ್ಯಾರೋಲಿನ್ ಹೆಸರಿನ ಈ ಪಾತ್ರಕ್ಕೆ ಪ್ರಿಯಾಂಕ ಅವರು ಬಣ್ಣ ಹಚ್ಚಿದ್ದು, ಒಟ್ಟು ನಲವತ್ತು ದಿನಗಳ ಕಾಲ ಬೆಂಗಳೂರು ಹಾಗೂ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ‘ಮಮ್ಮಿ’ ಸಿನಿಮಾ ಖ್ಯಾತಿಯ ಲೋಹಿತ್ ಮೇಲ್ವಿಚಾರಣೆ ವಹಿಸಿಕೊಂಡಿದ್ದು, ನಿರ್ದೇಶನದ ಹೊಣೆಯನ್ನು ಅರುಣ್‌ಕುಮಾರ್ ಹಾಗೂ ಸಾಬುಅಲೋಶಿಯಸ್ ಜಂಟಿಯಾಗಿ ನಿರ್ವಹಿಸಿದ್ದಾರೆ.

ಚಿತ್ರದಲ್ಲಿ, ಪೃಥ್ವಿ ಅಂಬರ್ ಒಂದು ಹಾಡಿಗೂ ಧ್ವನಿಯಾಗಿದ್ದು, ಲಾಸ್ಯ ನಾಗರಾಜ್ ಈ ಚಿತ್ರದ ನಾಯಕಿ. ಉಳಿದಂತೆ ಸಿದ್ಲುಂಗು ಶ್ರೀಧರ್, ಪದ್ಮ ಶಿವಮೊಗ್ಗ, ಮಾಂತೇಶ್ ಮುಂತಾದವರು ನಟಿಸಿದ್ದಾರೆ. ಮದನ್ ಬೆಳ್ಳಿಸಾಲು, ಧನಂಜಯ್ ರಂಜನ್ ಸಾಹಿತ್ಯದ ಗೀತೆಗಳಿಗೆ ನೋಬಿನ್ ಪೌಲ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಗೌತಮ್ ಛಾಯಾಗ್ರಹಣ, ಸಂದೀಪ್ ಸಂಕಲನವಿದೆ. ಸಿನಿಮಾಗೆ ಕಿಶೋರ್ ನರಸಿಂಹಯ್ಯ ಮತ್ತು ಬಿ.ಜಿ.ಅರುಣ್ ಬಂಡವಾಳ ಹೂಡಿದ್ದಾರೆ. ಫ್ರೈಡೆ ಫಿಲಿಂಸ್ ಮತ್ತು ಸಿಲ್ವರ್ ಟ್ರೈನ್ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಚಿತ್ರವನ್ನು ಶೀಘ್ರದಲ್ಲೇ ತೆರೆಗೆ ತರಲು ಚಿತ್ರತಂಡವು ಸಿದ್ಧತೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.