ಅಲ್ಲು ಅರ್ಜುನ್ ನಾಯಕರಾಗಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ದಲ್ಲಿ ನಟ ‘ಡಾಲಿ’ ಧನಂಜಯ್ ‘ಜಾಲಿ ರೆಡ್ಡಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಧನಂಜಯ್ ಅವರ ಜನ್ಮದಿನವಾದ ಸೋಮವಾರ(ಆ.23) ‘ಪುಷ್ಪ’ ಚಿತ್ರತಂಡವು ಧನಂಜಯ್ ಅವರ ಪಾತ್ರದ ಫಸ್ಟ್ಲುಕ್ ಬಿಡುಗಡೆ ಮಾಡಿದ್ದು, ಜನ್ಮದಿನದ ಶುಭಾಶಯ ಕೋರಿದೆ. ‘ಆರ್ಯ’ ಹಾಗೂ ‘ಆರ್ಯ 2’ ಚಿತ್ರಗಳನ್ನು ನಿರ್ದೇಶಿಸಿದ್ದ ಸುಕುಮಾರ್ ನಿರ್ದೇಶನದ ಈ ಚಿತ್ರವು ತೆಲುಗು, ಕನ್ನಡ, ಮಲಯಾಳಂ, ಹಿಂದಿ, ತಮಿಳು ಭಾಷೆಯಲ್ಲಿ ತೆರೆಕಾಣಲಿದೆ. ರಶ್ಮಿಕಾ ಮಂದಣ್ಣ ಚಿತ್ರದ ನಾಯಕಿ. ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ಕೂಡಾ ಈ ಚಿತ್ರದಲ್ಲಿದ್ದಾರೆ.

‘ಪುಷ್ಪ’ದಲ್ಲಿ ಅಲ್ಲು ಅರ್ಜುನ್ ಅವರ ಜೊತೆಗಿನ ನಟನೆಯ ಅನುಭವವನ್ನು ಇತ್ತೀಚೆಗೆ ‘ಪ್ರಜಾವಾಣಿ’ ಜೊತೆಗಿನ ಸಂದರ್ಶನದ ವೇಳೆ ಹಂಚಿಕೊಂಡಿದ್ದ ಧನಂಜಯ್ ಅವರು, ‘ಈ ಮಟ್ಟದ ಬಜೆಟ್ ಸಿನಿಮಾಗಳಲ್ಲಿ ಅನುಭವಕ್ಕಾಗಿ ಕೆಲಸ ಮಾಡಬೇಕು. ಸುಕುಮಾರ್ ಅವರಂತಹ ನಿರ್ದೇಶಕರು, ಅಲ್ಲು ಅರ್ಜುನ್ ಅವರಂತಹ ಪ್ಯಾನ್ ಇಂಡಿಯಾ ನಾಯಕ. ಪರಿಪೂರ್ಣ ದೃಶ್ಯದ ಚಿತ್ರೀಕರಣಕ್ಕೆ ಅವರು ಎಷ್ಟು ಕೆಲಸ ಮಾಡುತ್ತಾರೆ, ಅದಕ್ಕೆ ತೆಗೆದುಕೊಳ್ಳುವ ಸಮಯ ಹೀಗೆ ‘ಪುಷ್ಪ’ದಲ್ಲಿ ಕಲಿಯುವಂತಹದು ನನಗೆ ಬಹಳಷ್ಟಿದೆ. ಹೀಗಾಗಿ ಈ ರೀತಿಯ ಪ್ರಾಜೆಕ್ಟ್ಗಳಿಗೆ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ನಾನೇ ನುಗ್ಗಿ ಇದರಲ್ಲಿ ಭಾಗವಹಿಸುತ್ತೇನೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.