ಬೆಂಗಳೂರು: ಖ್ಯಾತ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನವಾದ ಡಿಸೆಂಬರ್ 1ನ್ನು ನಿರ್ದೇಶಕರ ದಿನವನ್ನಾಗಿ ಆಚರಿಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮ. ಹರೀಶ್ ಗುರುವಾರ ಘೋಷಿಸಿದರು.

ಮಂಡಳಿಯ ಕಚೇರಿಯಲ್ಲಿ ಪುಟ್ಟಣ್ಣ ಕಣಗಾಲ್ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು.

‘ಪುಟ್ಟಣ್ಣ ಕಣಗಾಲ್ ಅವರ ಗೌರವಾರ್ಥ ಈ ದಿನವನ್ನು ನಿರ್ದೇಶಕರ ದಿನವನ್ನಾಗಿ ಘೋಷಿಸಲಾಗುತ್ತಿದೆ. ಚಿತ್ರೋದ್ಯಮದ ಮಾತೃ ಸಂಸ್ಥೆಯಾದ ವಾಣಿಜ್ಯ ಮಂಡಳಿಯ ಕರೆಗೆ ಎಲ್ಲರೂ ಬದ್ಧರಾಗಿದ್ದಾರೆ. ನಿರ್ದೇಶಕರ ದಿನದಂದು ಚಿತ್ರೋದ್ಯಮದ ಎಲ್ಲ ಚಟುವಟಿಕೆಗಳು ಎಂದಿನಂತೆಯೇ ನಡೆಯಲಿವೆ. ಆಯಾ ಸ್ಥಳಗಳಲ್ಲಿ (ಶೂಟಿಂಗ್, ಡಬ್ಬಿಂಗ್... ಇತ್ಯಾದಿ ಕಡೆಗಳಲ್ಲಿ) ಪುಟ್ಟಣ್ಣ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಆ ದಿನವನ್ನು ಆಚರಿಸಿ ಮತ್ತೆ ಚಿತ್ರರಂಗದ ಚಟುವಟಿಕೆಗಳನ್ನು ಮುಂದುವರಿಸಬೇಕು’ ಎಂದು ಭಾ.ಮ. ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.