‘ಕಬ್ಜ–2’, ‘ಡಾಗ್’, ‘ಫಾದರ್’, ‘ಪಿ.ಒ.ಕೆ’, ‘ಶ್ರೀ ರಾಮ ಬಾಣ ಚರಿತ’ ಹಾಗೂ ಶಿವರಾಜ್ಕುಮಾರ್ ನಟನೆಯ ಹೊಸ ಸಿನಿಮಾ–ಹೀಗೆ ತಮ್ಮ ‘ಆರ್.ಸಿ. ಸ್ಟುಡಿಯೊಸ್’ನಲ್ಲಿ ಏಕಕಾಲಕ್ಕೆ ಆರು ಸಿನಿಮಾಗಳ ನಿರ್ಮಾಣವನ್ನು ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಘೋಷಿಸಿದ್ದರು. ಇದರಲ್ಲಿ ‘ಫಾದರ್’ ಎನ್ನುವ ಸಿನಿಮಾದ ಮುಹೂರ್ತ ಶನಿವಾರ(ಏ.27) ನಡೆಯಲಿದೆ.

ರಾಜಮೋಹನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದಲ್ಲಿ ‘ಲವ್ ಮಾಕ್ಟೇಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ತೆಲುಗಿನ ಖ್ಯಾತ ನಟ ಸುನೀಲ್ ಸೇರಿದಂತೆ ಅನೇಕ ಪರಭಾಷಾ ನಟ, ನಟಿಯರ ದಂಡೇ ಈ ಚಿತ್ರದಲ್ಲಿರಲಿದೆ ಎನ್ನುವ ಮುನ್ಸೂಚನೆಯನ್ನೂ ಚಂದ್ರು ನೀಡಿದ್ದಾರೆ.

ಸಿನಿಮಾದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಅಪ್ಪ ಮಗನ ಬಾಂಧವ್ಯ ಕುರಿತಾದ ಕಥಾಹಂದರ ಹೊಂದಿದೆ. ಆರ್.ಸಿ. ಸ್ಟುಡಿಯೊಸ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ‘ಜಗತ್ತಿನಲ್ಲಿ ಅಪ್ಪನ ಸ್ಥಾನ ತುಂಬುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅಪ್ಪ ಆಕಾಶಕ್ಕಿಂತಲೂ ಮಿಗಿಲು. ಅಪ್ಪನ ಬಿಸಿಯುಸಿರು, ಅಪ್ಪನ ಅಪ್ಪುಗೆ, ಅಪ್ಪನ ನೋವು, ಅಪ್ಪನ ಬೆವರು, ಅಪ್ಪನ ಕಾತರ, ಆತುರ, ಚಡಪಡಿಕೆ, ಆಸೆ, ಜವಾಬ್ದಾರಿ ಇತ್ಯಾದಿಗಳ ರೂಪವೇ ಈ ‘ಫಾದರ್’’ ಎಂದಿದ್ದಾರೆ ಚಂದ್ರು.

‘ಕಬ್ಜ’ದ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಪಡೆದಿತ್ತು. ಇದೀಗ ‘ಫಾದರ್’ ಸಿನಿಮಾವನ್ನು ಆನಂದ್ ಪಂಡಿತ್ ಪ್ರಸೆಂಟ್ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.