ನವದೆಹಲಿ (ಪಿಟಿಐ): ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಫ್ಟಿಐಐ) ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಆಗಿ ನಟ, ಚಿತ್ರ ನಿರ್ಮಾಪಕ ಆರ್. ಮಾಧವನ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ಈ ಕುರಿತ ಸುದ್ದಿಯನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ‘ಎಕ್ಸ್’ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

‘ನಿಮ್ಮ ಅಪಾರ ಅನುಭವ ಮತ್ತು ನೈತಿಕ ಬಲವು ಈ ಸಂಸ್ಥೆಯನ್ನು ಸಮೃದ್ಧಗೊಳಿಸಲಿದೆ. ಸಕಾರಾತ್ಮಕ ಬದಲಾವಣೆ ತಂದು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಒಯ್ಯಲಿದೆ ಎನ್ನುವ ಭರವಸೆ ನನ್ನದು. ನಿಮಗೆ ಶುಭವಾಗಲಿ’ ಎಂದು ಅವರು ಹಾರೈಸಿದ್ದಾರೆ.

‘ಇಸ್ರೊ’ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನವನ್ನು ಆಧರಿಸಿದ ‘ರಾಕೆಟ್ರಿ: ದ ನಂಬಿ ಎಫೆಕ್ಟ್’ ಸಿನಿಮಾದ ಮೂಲಕ ಮಾಧವನ್ ಚಿತ್ರ ನಿರ್ಮಾಪಕರಾಗಿದ್ದು, ಈ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.