ರಾಶಿ ಖನ್ನಾ ಬಹುಭಾಷಾ ನಟಿ. ಬಾಲಿವುಡ್ನ ‘ಮದ್ರಾಸ್ ಕೆಫೆ’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಆಕೆಗೆ ಭದ್ರನೆಲೆ ಒದಗಿಸಿದ್ದು ಟಾಲಿವುಡ್. ದೆಹಲಿ ಮೂಲದ ಆಕೆ ಗಾಯಕಿಯೂ ಹೌದು.

ವಿಜಯ್ ದೇವರಕೊಂಡ ನಟನೆಯ ತೆಲುಗಿನ ‘ವರ್ಡ್ ಫೇಮಸ್ ಲವರ್’ ಸಿನಿಮಾದಲ್ಲಿ ಆಕೆ ನಾಯಕಿಯಾಗಿ ನಟಿಸಿದ್ದರು. ಹಸಿ ಹಸಿಯಾದ ದೃಶ್ಯಗಳಲ್ಲಿ ಆಕೆ ಕಾಣಿಸಿಕೊಂಡಿದ್ದು ಉಂಟು. ಆದರೆ, ಈ ಇಬ್ಬರ ಕೆಮಿಸ್ಟ್ರಿಯು ಪರದೆ ಮೇಲೆ ಫಲ ನೀಡಲಿಲ್ಲ. ಬಾಕ್ಸ್ಆಫೀಸ್ನಲ್ಲಿ ಈ ಸಿನಿಮಾ ಸಂಪೂರ್ಣವಾಗಿ ನೆಲಕಚ್ಚಿತು.

ಆದರೆ, ‘ವೆಂಕಿ ಮಾಮ’ ಮತ್ತು ‘ಪ್ರತಿ ರೋಜು ಪಾಂಡೇಜ್’ ಸಿನಿಮಾಗಳ ಗೆಲುವು ಆಕೆಗೆ ತೆಲುಗಿನಲ್ಲಿ ಅವಕಾಶದ ಹೆಬ್ಬಾಗಿಲು ತೆರೆಯುವಂತೆ ಮಾಡಿವೆ.

ಸ್ಟಾರ್ ನಟ, ನಟಿಯರು ಸಿನಿಮಾದ ಜೊತೆ ಜೊತೆಗೆಯೇ ವೆಬ್ ಸರಣಿಗಳಲ್ಲಿ ನಟಿಸುತ್ತಿರುವುದು ಸರ್ವೇ ಸಾಮಾನ್ಯ. ಕೋವಿಡ್ ಪರಿಣಾಮ ಥಿಯೇಟರ್ಗಳು ಕೂಡ ಬಾಗಿಲು ಮುಚ್ಚಿವೆ. ಯಾವಾಗ ಪುನರಾರಂಭವಾಗುತ್ತವೆ ಎಂಬುದು ಗೊತ್ತಿಲ್ಲ. ಮತ್ತೊಂದೆಡೆಯುವಜನರು ಡಿಜಿಟಲ್ ಜಗತ್ತಿನತ್ತ ಹೊರಳಿದ್ದಾರೆ. ಈಗರಾಶಿಯ ಕಣ್ಣು ಕೂಡ ಡಿಜಿಟಲ್ ಜಗತ್ತಿನತ್ತ ಹೊರಳಿದೆಯಂತೆ. ವೆಬ್ ಸರಣಿಯಲ್ಲಿ ಅದೃಷ್ಟ ಪರೀಕ್ಷೆಗೆ ಆಕೆ ಸಜ್ಜಾಗಿದ್ದಾರೆ. ಶೀಘ್ರವೇ, ಆಕೆ ನಟಿಸಲಿರುವ ಹಿಂದಿಯ ವೆಬ್ ಸರಣಿಯ ಶೂಟಿಂಗ್ ಶುರುವಾಗುವ ನಿರೀಕ್ಷೆಯಿದೆ. ಆದರೆ, ಇನ್ನೂ ಈ ಸರಣಿಯ ಕಥೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ನಡುವೆಯೇ ಆಕೆ ತೆಲುಗು ಮತ್ತು ತಮಿಳಿನ ಬಿಗ್ ಬಜೆಟ್ ಸಿನಿಮಾಗಳಲ್ಲೂ ನಟಿಸಲು ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಆಕೆ ತಮಿಳಿನ ‘ಅರಣ್ಮಣೈ’ ಮತ್ತು ‘ಸೈತಾನ್ ಕಾ ಬಚ್ಚಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೋವಿಡ್–19 ಪರಿಣಾಮ ಈ ಸಿನಿಮಾಗಳ ಶೂಟಿಂಗ್ ವಿಳಂಬವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.