ಕಳೆದ ಶುಕ್ರವಾರ (ಸೆ.1) ತೆರೆಕಂಡ ಹೇಮಂತ್ ಎಂ.ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು, ಪ್ರದರ್ಶನ ಕಾಣುತ್ತಿದೆ. ರಕ್ಷಿತ್ ಶೆಟ್ಟಿ–ರುಕ್ಮಿಣಿ ವಸಂತ್ ಜೋಡಿ ತೆರೆಯಲ್ಲಿ ಮೋಡಿ ಮಾಡಿದ್ದು, ಸಿನಿಮಾ ಇತರೆ ಭಾಷೆಗಳಲ್ಲಿ ಡಬ್ ಆಗಿ ಪ್ರದರ್ಶನ ಕಾಣಲು ಸಜ್ಜಾಗುತ್ತಿದೆ.

ಸಿನಿಮಾ ಬಿಡುಗಡೆ ಮುನ್ನವೇ ಚಿತ್ರಕ್ಕೆ ಇತರೆ ಭಾಷೆಗಳಿಂದ ಬೇಡಿಕೆ ಇದ್ದ ಕಾರಣ, ಚಿತ್ರತಂಡವು ಮೊದಲೇ ಐದು ಭಾಷೆಗಳಲ್ಲಿ ಡಬ್ಬಿಂಗ್ ಪೂರ್ಣಗೊಳಿಸಿದೆ. ಈ ಪೈಕಿ ಹಿಂದಿ ಭಾಷೆಗೆ ಸ್ವತಃ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ಅವರು ಧ್ವನಿ ನೀಡಿದ್ದಾರೆ ಎನ್ನುತ್ತಾರೆ ನಿರ್ದೇಶಕ ಹೇಮಂತ್. ‘ಇತರೆ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ವಿಷಯ ಮಾತುಕತೆ ಹಂತದಲ್ಲಿದೆ’ ಎಂದಿದ್ದಾರೆ ನಿರ್ಮಾಪಕ ರಕ್ಷಿತ್ ಶೆಟ್ಟಿ.

ಸದ್ಯ ಚಿತ್ರತಂಡ ರಾಜ್ಯದೆಲ್ಲೆಡೆಯ ಚಿತ್ರಮಂದಿರಗಳ ಪ್ರವಾಸದಲ್ಲಿದೆ. ಈಗಾಗಲೇ ಬೆಂಗಳೂರಿನ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಿರುವ ಚಿತ್ರತಂಡವು, ಸೆ.7ರಂದು ಉಡುಪಿ, ಕುಂದಾಪುರ, ಸೆ.8ರಂದು ಮಂಗಳೂರು, ಸೆ.9ರಂದು ಶಿವಮೊಗ್ಗ, ಸೆ.10 ಹುಬ್ಬಳ್ಳಿ–ಧಾರವಾಡ, ಸೆ.11ರಂದು ಬೆಳಗಾವಿ ಹಾಗೂ ಸೆ.12ರಂದು ದಾವಣಗೆರೆ ಮತ್ತು ತುಮಕೂರು ನಗರದಲ್ಲಿನ ಥಿಯೇಟರ್ಗಳಿಗೆ ಭೇಟಿ ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.