ಅತ್ತ ನಿರ್ದೇಶಕ ರೋಹಿತ್ ಪದಕಿ ವಿಜಯಪುರ ಮತ್ತು ಹುಬ್ಬಳ್ಳಿಯಲ್ಲಿ ‘ಉತ್ತರಕಾಂಡ’ ಸಿನಿಮಾಕ್ಕಾಗಿ ಆಡಿಷನ್ ನಡೆಯುತ್ತಿದ್ದರೆ, ಇತ್ತ ಚಿತ್ರದ ನಾಯಕಿ, ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ತಾವು ಸಿನಿಮಾದಿಂದ ಹೊರನಡೆದಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ‘ಡೇಟ್ಸ್ ಸಮಸ್ಯೆಯಿಂದಾಗಿ ನಾನು ‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸುತ್ತಿಲ್ಲ. ಸದ್ಯ ನಾನು ನನ್ನ ಸಿನಿಮಾ ಮತ್ತು ರಾಜಕೀಯ ಒಪ್ಪಂದಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇನೆ. ಉತ್ತರಕಾಂಡ ಚಿತ್ರತಂಡಕ್ಕೆ ಶುಭವಾಗಲಿ’ ಎಂದಿದ್ದಾರೆ.

ರಾಜ್ ಬಿ.ಶೆಟ್ಟಿ ನಟನೆಯ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ಸೆಟ್ಟೇರಿದ್ದಾಗ ರಮ್ಯಾ ನಾಯಕಿಯಾಗಿದ್ದರು. ಇದು ಅವರ ಕಂಬ್ಯಾಕ್ ಸಿನಿಮಾ ಎನ್ನಲಾಗಿತ್ತು. ಕೆಲ ಸಮಯದ ಬಳಿಕ ಈ ಸಿನಿಮಾದಿಂದ ಅವರು ಹೊರನಡೆದಿದ್ದರು. ಬಳಿಕ ‘ಉತ್ತರಕಾಂಡ’ ಸಿನಿಮಾ ಒಪ್ಪಿಕೊಂಡಿದ್ದರು. ‘ರತ್ನನ್ ಪ್ರಪಂಚ’ ಸಿನಿಮಾ ಯಶಸ್ಸಿನ ಬಳಿಕ ಕೆ.ಆರ್.ಜಿ ಸ್ಟುಡಿಯೋಸ್, ನಟ ಡಾಲಿ ಧನಂಜಯ ಮತ್ತು ರೋಹಿತ್ ಪದಕಿ ಕಾಂಬಿನೇಷನ್ನಲ್ಲಿ ಈ ಸಿನಿಮಾ ಸೆಟ್ಟೇರಿದೆ. ಉತ್ತರ ಕರ್ನಾಟಕ ಭಾಷೆಯಲ್ಲೇ ಸಿನಿಮಾ ಇರುವ ಕಾರಣ, ಚಿತ್ರಕ್ಕಾಗಿ ಭಾಷೆ, ಉಡುಗೆ-ತೊಡುಗೆಯ ಮೇಲೆ ಗಂಭೀರವಾಗಿ ಕಸರತ್ತು ನಡೆಸಿದ್ದರು. ‘ಉತ್ತರಕಾಂಡ’ದಲ್ಲಿ ಧನಂಜಯ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.