ಹಿಂದಿಯ ‘ಮದ್ರಾಸ್ ಕೆಫೆ’ ಚಿತ್ರದ ಮೂಲಕ ಬಣ್ಣದಲೋಕ ಪ್ರವೇಶಿಸಿದವರು ನಟಿ ರಾಶಿ ಖನ್ನಾ. ದೆಹಲಿ ಮೂಲದ ಈಕೆ ಗಾಯಕಿಯೂ ಹೌದು. ತೆಲುಗು, ಮಲಯಾಳ ಮತ್ತು ತಮಿಳಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಫೆಬ್ರುವರಿಯಲ್ಲಿ ತೆರೆಕಂಡ ನಟ ವಿಜಯ್ ದೇವರಕೊಂಡ ಜೊತೆಗೆ ಆಕೆ ನಟಿಸಿದ ತೆಲುಗಿನ ‘ವರ್ಡ್ ಫೇಮಸ್ ಲವರ್’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿತು.

ಕ್ರಾಂತಿ ಮಾಧವ್ ಆ್ಯಕ್ಷನ್ ಕಟ್ ಹೇಳಿದ್ದ ಸಿನಿಮಾ ಇದು. ಚಿತ್ರಕ್ಕಾಗಿ ದುಡಿದ ತಂತ್ರಜ್ಞರ ತಂಡಕ್ಕೆ ಈ ಸೋಲು ನಿರಾಶೆ ಮೂಡಿಸಿದ್ದು ಗುಟ್ಟೇನಲ್ಲ. ಇದರಲ್ಲಿ ರಾಶಿ ಕೂಡ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ,ವಿಜಯ್ ದೇವರಕೊಂಡ ಮತ್ತು ರಾಶಿಯ ಲವ್ ಕೆಮಿಸ್ಟ್ರಿ ಪರದೆ ಮೇಲೆ ಫಲಕಾರಿಯಾಗಲಿಲ್ಲ. ಈ ಚಿತ್ರದ ಸೋಲಿನಿಂದ ರಾಶಿ ತೀವ್ರ ಹತಾಶರಾಗಿದ್ದಾರೆ. ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ಆಕೆಯ ಪೋಷಕರಿಗೂ ಬೇಸರವಿದೆ ಎಂಬ ಮಾತುಗಳು ಟ್ವಿಟರ್ನಲ್ಲಿ ಹರಿದಾಡಿದ್ದು ಉಂಟು.

ಕೊನೆಗೆ, ರಾಶಿ ಖುದ್ದಾಗಿ ಈ ಗಾಳಿಸುದ್ದಿಗೆ ಟ್ವೀಟ್ ಮೂಲಕವೇ ಉತ್ತರಿಸಿದ್ದಾರೆ. ‘ನಾನು ನಟಿಸಿದ ಸಿನಿಮಾಗಳ ಪರವಾಗಿ ನಿಲ್ಲುವುದು ನನ್ನ ಜವಾಬ್ದಾರಿ. ನಾನು ಇಷ್ಟಪಟ್ಟು ನಟಿಸಿದ ಚಿತ್ರಗಳು ಮತ್ತು ಅದರಲ್ಲಿನ ಪಾತ್ರಗಳ ಬಗ್ಗೆ ವಿಷಾದವಿಲ್ಲ. ಚಿತ್ರವೊಂದು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಬಹುದು ಅಥವಾ ಸೋಲಬಹುದು. ಆದರೆ, ಸಿನಿಮಾ ಎಂಬುದು ಸುಂದರವಾದ ಜರ್ನಿ. ಆ ಪಯಣದಲ್ಲಿ ಕಲಿತು, ಸಾಮರ್ಥ್ಯ ವೃದ್ಧಿಸಿಕೊಳ್ಳಲು ಕಲಾವಿದರಿಗೆ ಆ ಚಿತ್ರ ವೇದಿಕೆಯಾಗುತ್ತದೆ ಎಂಬ ಸತ್ಯವನ್ನು ಮರೆಯಬಾರದು’ ಎಂದಿದ್ದಾರೆ ರಾಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.