‘ಪ್ರತಿಭೆ ಇದ್ದರೆ ಸಾಕು. ಚಿತ್ರರಂಗದಲ್ಲಿ ಯಶಸ್ಸು ಗಳಿಸಬಹುದು ಎಂಬ ನಂಬಿಕೆ ಸುಳ್ಳಾಗಿದೆ.ಪ್ರತಿಭೆಯೊಂದಿಗೆ ಅದೃಷ್ಟವೂ ಇದ್ದರೆ ಮಾತ್ರ ಗೆಲ್ಲಲು ಸಾಧ್ಯ’.

– ರಾತ್ರಿ ಬೆಳಗಾಗುವುದರೊಳಗೆ ಪ್ರಿಯಾ ಪ್ರಕಾಶ್ ವಾರಿಯರ್ಗೆ ತಾರಾ ಮೌಲ್ಯ ತಂದುಕೊಟ್ಟ ಕಣ್ಸನ್ನೆಯ ವಿಡಿಯೊದಲ್ಲಿದ್ದ ಹುಡುಗ ರೋಷನ್ ಅಬ್ದುಲ್ ರವೂಫ್ ಅವರಿಗೆ ಈಗ ಅರಿವಾಗಿರುವ ವಾಸ್ತವ ಇದು.

‘ಪ್ರಿಯಾಗೆ ಅದೃಷ್ಟವೂ ಇರುವ ಕಾರಣ ಅವಳ ಪ್ರತಿಭೆಗೆ ಬೆಲೆ ಸಿಕ್ಕಿದೆ. ಅವಳು ನನ್ನ ಗೆಳತಿ. ‘ಒರು ಅಡಾರ್ ಲವ್’ನಲ್ಲಿ ನಟಿಸಿದ ನಾಲ್ಕೂ ಮಂದಿ ಹೊಸಬರೇ. ಹಾಗಿರುವಾಗ ಒಬ್ಬರನ್ನೊಬ್ಬರು ಹೋಲಿಸಿಕೊಳ್ಳುವುದು ತೀರಾ ಬಾಲಿಶ. ಹಾಗಂತ ಪ್ರಿಯಾಗೆ ಸಿಕ್ಕಿದ ಅವಕಾಶಗಳು ನಮಗೆ ಸಿಗದೇ ಇರುವುದಕ್ಕೆ ಅದೃಷ್ಟದಾಟವೇ ಕಾರಣ’ ಎಂಬುದು ರೋಷನ್ ಅಭಿಪ್ರಾಯ.

‘ಒರು ಒಡಾರ್ ಲವ್’ನಲ್ಲಿ ನಟಿಸಿದಾಗ ರೋಷನ್ಗೆ ಇನ್ನೂ 18ರ ಹರೆಯ. ಇದೇ ಏಪ್ರಿಲ್ಗೆ ಅವರು 20ಕ್ಕೆ ಕಾಲಿಡುತ್ತಾರೆ. ಒಂದೇ ಚಿತ್ರ ಅವರಿಗೆ ಬದುಕಿನ ಹಲವು ಸತ್ಯಗಳನ್ನೂ, ಜಗತ್ತನ್ನೂ ಪರಿಚಯಿಸಿಕೊಟ್ಟಿದೆಯಂತೆ. ಎಲ್ಲಿ ಹೋದರೂ ಜನ ಮುತ್ತಿಕೊಂಡು ಸೆಲ್ಫಿಗಾಗಿ ಮುಗಿಬೀಳುತ್ತಾರೆ ಹಾಗಂತ ತಾನೊಬ್ಬ ಸೆಲೆಬ್ರಿಟಿ ಎಂಬ ಭ್ರಮೆ ಈ ಯುವಕನಿಗಿಲ್ಲ.

ಶಾರುಖ್ ಖಾನ್ನ ದೊಡ್ಡ ಅಭಿಮಾನಿಯಾದ ರೋಷನ್ಗೆ ನೃತ್ಯವೆಂದರೆ ಪ್ರಾಣ. ಚಿತ್ರರಂಗಕ್ಕೆ ಪರಿಚಯಗೊಂಡಿದ್ದೂ ಡಿ4ಡಿ ಎಂಬ ರಿಯಾಲಿಟಿ ಶೋ ಮೂಲಕ. ರೋಷನ್ಗೆ ಯಾವುದೇ ಭಾಷೆಯ ಚಿತ್ರದಿಂದ ಅವಕಾಶ ಬಂದರೂ ಒಪ್ಪಿಕೊಳ್ಳುವ ಉಮೇದು ಇದೆ. ಆದರೆ ಅಫರ್ಗಳು ಬರಬೇಕೆಂದರೆ ಅದೃಷ್ಟ ಇರಬೇಕಲ್ಲ ಎಂಬುದು ಅವರ ನಂಬಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.