ಇತ್ತೀಚೆಗಷ್ಟೇ ಘೋಷಣೆಯಾಗಿದ್ದ ‘ಲೂಸ್ ಮಾದ’ ಯೋಗಿ ಅಭಿನಯದ 50ನೇ ಚಿತ್ರದ ಶೀರ್ಷಿಕೆ ವಿವಾದ ಇದೀಗ ನಟ ಶಿವರಾಜ್ಕುಮಾರ್ ಅಂಗಳ ತಲುಪಿದೆ.

ಅರ್ಜುನ್ ಜನ್ಯ ನಿರ್ದೇಶನದ ಹೊಸ ಸಿನಿಮಾದಲ್ಲಿ ಶಿವರಾಜ್ಕುಮಾರ್ ನಟಿಸುತ್ತಿದ್ದು, ಈ ಚಿತ್ರದ ಶೀರ್ಷಿಕೆ ಮೊದಲು ‘45’ ಎಂಬುದಾಗಿತ್ತು. ಇದನ್ನು ಚಿತ್ರತಂಡ ‘ರೋಸಿ 45’ ಎಂದು ಬದಲಿಸಿದೆ. ಏಪ್ರಿಲ್ 9ರಂದು ಯೋಗಿ ನಟನೆಯ ಹೊಸ ಸಿನಿಮಾ ‘ರೋಸಿ’ ಸೆಟ್ಟೇರಿತ್ತು.

ಇದರ ಬೆನ್ನಲ್ಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ನಿರ್ದೇಶಕ ಅರ್ಜುನ್ ಜನ್ಯ, ‘ಸೂರಜ್ ಪ್ರೊಡಕ್ಷನ್ಸ್ಗೆ ‘ರೋಸಿ 45’ (Rosy 45) ಎಂಬ ಶೀರ್ಷಿಕೆ ಸೇರಿದೆ. ಇನ್ನು ಮುಂದೆ ಯಾರು ಕೂಡ ‘ರೋಸಿ’ ಎಂಬ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ಸಂಖ್ಯೆಗಳನ್ನಾಗಲಿ ಬಳಸುವ ಹಾಗಿಲ್ಲ’ ಎಂದು ತಿಳಿಸಿದ್ದರು. ಹೀಗಾಗಿ ಯೋಗಿ, ನಿರ್ದೇಶಕ ಶೂನ್ಯ ಹಾಗೂ ನಿರ್ಮಾಪಕರು ಶಿವರಾಜ್ಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಯೋಗಿ, ‘ಇದು ನನ್ನ 50ನೇ ಸಿನಿಮಾ. ಶೀರ್ಷಿಕೆಯನ್ನು ಬಿಟ್ಟುಕೊಟ್ಟರೆ ಸಹಾಯವಾಗುತ್ತದೆ. ಏಕೆಂದರೆ ನಾವು ಈಗಾಗಲೇ ಎಲ್ಲ ಕಡೆ ಶೀರ್ಷಿಕೆ ಘೋಷಿಸಿದ್ದೇವೆ. ಇದು ಜನರನ್ನೂ ತಲುಪಿದೆ ಎನ್ನುವ ಮಾಹಿತಿಯನ್ನು ನಾನು ಶಿವಣ್ಣ ಅವರಿಗೆ ತಿಳಿಸಿದೆ. ಒಂದು ಕ್ಷಣವೂ ಯೋಚಿಸದೆ ಶಿವರಾಜ್ಕುಮಾರ್ ಅವರು ಚಿತ್ರತಂಡದ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ. ಅವರ ಚಿತ್ರದ ಶೀರ್ಷಿಕೆ ‘ರೋಸಿ 45’ ಆಗಿದೆ ಎಂದಾಗ ಅವರೇ ಒಂದು ಕ್ಷಣ ಆಶ್ಚರ್ಯ ವ್ಯಕ್ತಪಡಿಸಿದರು. ಇದಾದ ಬಳಿಕ ಏನು ಬೆಳವಣೆಗೆ ಆಗಿದೆ ಎಂದು ತಿಳಿದಿಲ್ಲ. ನಮ್ಮ ಸಿನಿಮಾದ ಶೀರ್ಷಿಕೆ ರೋಸಿ ಎಂದೇ ಇರಲಿದೆ. ಚೇಂಬರ್ನಲ್ಲೂ ನಮಗೆ ಒಪ್ಪಿಗೆ ಸಿಕ್ಕಿದೆ. ಮೇ ಎರಡನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದಲ್ಲಿ ಹೀರೊಯಿನ್ ಇಲ್ಲ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.