ಬೆಂಗಳೂರು: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಪ್ಯಾನ್ ಇಂಡಿಯಾ ಸಿನಿಮಾ ಆರ್ಆರ್ಆರ್(ರೌದ್ರ–ರಣ–ರುಧಿರ) 2022ರ ಜನವರಿ 7ರಂದು ಬಿಡುಗಡೆಯಾಗುತ್ತಿದೆ. ಸ್ಟಾರ್ ನಟರೇ ತುಂಬಿರುವ ಈ ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮ ಕರ್ನಾಟಕದಲ್ಲೂ ನಡೆಯಲಿದೆ ಎಂದು ರಾಜಮೌಳಿ ಶುಕ್ರವಾರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಆರ್ಆರ್ಆರ್ ಚಿತ್ರದ ಜನನಿ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ರಾಜಮೌಳಿ, ‘ಎಲ್ಲರಿಗೂ ನಮಸ್ಕಾರ..ಎಲ್ಲರೂ ಚೆನ್ನಾಗಿದ್ದೀರಾ? ಕ್ಷಮೆ ಇರಲಿ. ನನ್ನ ಕನ್ನಡದ ಬಗ್ಗೆ..ತುಂಬಾ ಪ್ರಯತ್ನ ಮಾಡುತ್ತಿದ್ದೇನೆ. ನೀವೇ ಅಡ್ಜೆಸ್ಟ್ ಮಾಡಿಕೊಳ್ಳಬೇಕು’ ಎಂದರು.

ಆರ್ಆರ್ಆರ್ ಸಿನಿಮಾ ಕುರಿತು ಮಾತನಾಡಿದ ಅವರು, ‘ಮುಂದಿನ ತಿಂಗಳು ಇಡೀ ಆರ್ಆರ್ಆರ್ ತಂಡ ನಿಮ್ಮ ಮುಂದೆ ಇರಲಿದೆ. ಡಿಸೆಂಬರ್ ಮೊದಲ ವಾರದಲ್ಲಿ ಟ್ರೈಲರ್ ರಿಲೀಸ್ ಆಗಲಿದೆ. ಕರ್ನಾಟಕದಲ್ಲಿ ಅದ್ಧೂರಿಯಾಗಿ ಪ್ರಿರಿಲೀಸ್ ಕಾರ್ಯಕ್ರಮ ಮಾಡಲು ನಾವು ನಿರ್ಧರಿಸಿದ್ದು, ಜ್ಯೂನಿಯರ್ ಎನ್ಟಿಆರ್, ರಾಮ್ಚರಣ್ ತೇಜ, ಅಜಯ್ ದೇವ್ಗನ್, ಆಲಿಯಾ ಭಟ್ ಸೇರಿದಂತೆ ಇಡೀ ಚಿತ್ರತಂಡವೇ ಕರ್ನಾಟಕಕ್ಕೆ ಬರಲಿದೆ’ ಎಂದರು.

‘ಜನನಿ ಎನ್ನುವುದು ಕೇವಲ ಹಾಡಲ್ಲ. ಅದು ಆರ್ಆರ್ಆರ್ ಚಿತ್ರದ ಸೋಲ್ ಆ್ಯಂಥಮ್. ಆರ್ಆರ್ಆರ್ನಲ್ಲಿರುವ ಅತ್ಯಾಕರ್ಷಕವಾದ ದೃಶ್ಯ, ಫೈಟ್ಸ್, ಡ್ಯಾನ್ಸ್ಗಳನ್ನು ನೀವು ನೋಡಿದ್ದೀರಿ. ಇವೆಲ್ಲದರ ಹಿಂದೆ ಒಂದು ಭಾವನೆಯಿದೆ. ಈ ಭಾವನೆ ಇಲ್ಲದೆ ಯಾವುದೇ ಸಿನಿಮಾ ಅಥವಾ ದೃಶ್ಯ ಚಿತ್ರೀಕರಿಸಲು ಸಾಧ್ಯವಿಲ್ಲ. ಈ ಹಾಡನ್ನು ಕೇವಲ ನೋಡಬಾರದು, ಜನರು ಅನುಭವಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.