ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ತಮ್ಮ ಮುಂಬರುವ ಚಿತ್ರ ರೌದ್ರಂರಣಂ ರುಧಿರಮ್ (ಆರ್.ಆರ್.ಆರ್) ನ ಹೊಸ ಟೀಸರ್ ಅನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ. ವಿಶೇಷ ಟೀಸರ್ನಲ್ಲಿ ಜೂನಿಯರ್ ಎನ್ಟಿಆರ್ ನಟಿಸಿರುವಕೋಮರಂ ಭೀಮ್ ಪಾತ್ರವನ್ನು ಪರಿಚಯಿಸಲಾಗಿದೆ.

ಕೋಮರಂ ಭೀಮ್ ಯಾವುದೇ ಔಪಚಾರಿಕ ಶಿಕ್ಷಣಪಡೆಯದೆ ಕೆಲ ವರ್ಷಗಳ ಕಾಲ ಹಳ್ಳಿಯನ್ನು ತೊರೆಯುತ್ತಾರೆ. ಕೆಲ ವರ್ಷಗಳ ಬಳಿಕ ವಿದ್ಯಾವಂತನಾಗಿ ಹಳ್ಳಿಗೆ ಮರಳುತ್ತಾರೆ. ಅಲ್ಲಿ ಬುಡಕಟ್ಟು ಜನರ ಹಕ್ಕುಗಳಿಗಾಗಿ ನಿಜಾಮ ಸರ್ಕಾರದ ವಿರುದ್ಧ ನಿರಂತರ ಹೋರಾಡುತ್ತಾರೆ. ಮುಂದೆ ಬ್ರಿಟಿಷರ ಕೈಯಲ್ಲಿ ಹತ್ಯೆಗೊಳಗಾಗುತ್ತಾರೆ.

ಆ ಹೋರಾಟಗಾರನನ್ನು ಈ ಟೀಸರ್ನಲ್ಲಿ ಭಾಗಶಃಚಿತ್ರಿಸಲಾಗಿದೆ. ಈ ಟೀಸರ್ ಮೇ 20ರಂದು ಬಿಡುಗಡೆ ಆಗುವ ನಿರೀಕ್ಷೆ ಇತ್ತು. ರಾಮ್ಚರಣ್ ಅವರ ಜನ್ಮದಿನದಂದು ರಾಜಮೌಳಿ ಅವರು ಅಲ್ಲೂರಿ ಸೀತಾರಾಮು ಪಾತ್ರವನ್ನು ಪರಿಚಯಿಸುವ ಟೀಸರ್ ಬಿಡುಗಡೆ ಮಾಡಿದರು.

ಒಂದೇ ಅವಧಿಯಲ್ಲಿ ಜನಿಸಿದ ವಿವಿಧ ಪ್ರದೇಶಗಳ ಇಬ್ಬರು ತೆಲುಗು ಬುಡಕಟ್ಟು ಮುಖಂಡರು ತಮ್ಮ ಹಳ್ಳಿಗಳಿಂದ ಕೆಲವು ವರ್ಷಗಳ ಕಾಲ ಕಣ್ಮರೆಯಾಗಿ ಹಿಂದಿರುಗಿರುವುದು, ಜನರ ಹಕ್ಕುಗಳಿಗಾಗಿ ಶಸ್ತ್ರ ಕೈಗೆತ್ತಿಕೊಂಡದ್ದು ಮತ್ತು ಬ್ರಿಟಿಷರ ಕೈಯಲ್ಲಿ ಹುತಾತ್ಮರಾದ ಚಿತ್ರಣ ಸಿನಿಮಾದಲ್ಲಿದೆ ಎಂದು ಹೇಳಲಾಗುತ್ತಿದೆ.

ಅಲ್ಲೂರಿ ಸೀತಾರಾಮ ರಾಜು ಮತ್ತು ಕೋಮರಾಂಭೀಮ್ ತಮ್ಮ ತಾಯ್ನಾಡಿನಿಂದ ದೂರವಿದ್ದ ವರ್ಷಗಳಲ್ಲಿ ಭೇಟಿಯಾಗಿ ಸ್ನೇಹಿತರಾಗಿದ್ದರೆ? ಆ ಪ್ರಶ್ನೆಇಲ್ಲಿ ಇದೆ. ಉತ್ತರಕ್ಕೆ ಚಿತ್ರ ಬಿಡುಗಡೆ ಆಗುವವರೆಗೆ ಕಾಯಬೇಕು. 1920ರ ಬ್ರಿಟಿಷ್ ಭಾರತದ ಹಿನ್ನೆಲೆಯಲ್ಲಿ ರೂಪಿಸಲಾದ ಈ ಕಥೆ ಟ್ರಿಪಲ್ ಆರ್ನಮೂಲ.

₹ 300 ಕೋಟಿ ಬಜೆಟ್ನಲ್ಲಿನಿರ್ಮಿಸಲಾದ ಎಸ್.ಎಸ್.ರಾಜಮೌಳಿ ಆರ್.ಆರ್.ಆರ್ ಅನ್ನು ಅಂತರರಾಷ್ಟ್ರೀಯಮಟ್ಟದ ಚಿತ್ರವನ್ನಾಗಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನವನ್ನೂ ಮಾಡಿದ್ದಾರೆ.

ಬ್ರಿಟಿಷ್ ನಟ ಒಲಿವಿಯಾ ಮೋರಿಸ್, ಹಾಲಿವುಡ್ ನಟ ರೇ ಸ್ಟೀವನ್ಸನ್, ಐರಿಶ್ ನಟ ಅಲಿಸನ್ ಡೂಡಿ ಚಿತ್ರದಲ್ಲಿದ್ದಾರೆ. ಬಾಲಿವುಡ್ ನಟರಾದ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.