ಎರಡು ದಶಕಗಳ ನಂತರ ನೀವು ಮತ್ತೆ ನಿರ್ದೇಶನಕ್ಕೆ ಇಳಿದಿದ್ದೀರಿ. ಇಷ್ಟು ವರ್ಷದ ಬಿಡುವು ಏಕಾಯಿತು?

1995ರಲ್ಲಿ ನಾನು ಕಡೆಯ ಸಿನಿಮಾ ನಿರ್ದೇಶನ ಮಾಡಿದ್ದು. ಆ ಕೆಲಸ ಪೂರ್ಣಗೊಂಡ ನಂತರ ನನಗೆ ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನ ಪ್ರಾಂಶುಪಾಲನಾಗಿ ಕೆಲಸ ಮಾಡುವ ಜವಾಬ್ದಾರಿ ಬಂತು. ಅಲ್ಲಿ ಹದಿನೆಂಟು ವರ್ಷ ಕೆಲಸ ಮಾಡಿದೆ, 2013ರ ವರೆಗೆ. ಅಂದರೆ, ಈ ಅವಧಿಯಲ್ಲಿ ನಾನು ಸುಮ್ಮನೆ ಕುಳಿತಿರಲಿಲ್ಲ.

ಅದರ ನಡುವೆ ಕೇಂದ್ರ ಸರ್ಕಾರದ ಸೂಚನೆ ಆಧರಿಸಿ ಕೆಲವು ಸಾಕ್ಷ್ಯಚಿತ್ರಗಳನ್ನು, ರಾಜ್ಯ ಸರ್ಕಾರದ ಸೂಚನೆ ಆಧರಿಸಿ ಇನ್ನೊಂದಿಷ್ಟು ಸಾಕ್ಷ್ಯಚಿತ್ರಗಳನ್ನು ಮಾಡಿದೆ. ಅಲ್ಲಿ ಪ್ರಾಂಶುಪಾಲನಾಗಿ ನಾನು ಅಂದಾಜು ಮುನ್ನೂರು ಯುವಕರನ್ನು ತರಬೇತುಗೊಳಿಸಿದೆ. ಅವರೆಲ್ಲ ಈಗ ನಿರ್ದೇಶನ ಹಾಗೂ ನಟನೆಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಆರರಿಂದ ಏಳು ಜನ ಪ್ರಮುಖ ನಟರು ನನ್ನ ಮಾರ್ಗದರ್ಶನದಲ್ಲಿ ತರಬೇತಿ ಪಡೆದವರಿದ್ದಾರೆ. ಪ್ರಾಂಶುಪಾಲನಾಗಿದ್ದ ಅವಧಿಯಲ್ಲಿ ನಿರ್ದೇಶನ ಮಾಡುವ ತುಡಿತ ಖಂಡಿತ ಇತ್ತು. ಆದರೆ ಪ್ರಾಂಶುಪಾಲ ಆಗಿದ್ದ ನನ್ನನ್ನು ನಿರ್ದೇಶನ ಮಾಡುವಂತೆ ಯಾರೂ ಕರೆಯಲಿಲ್ಲ!

ಸಿನಿಮಾ ನಿರ್ದೇಶನಕ್ಕೆ ಇಷ್ಟು ವರ್ಷ ಬಿಡುವು ಕೊಟ್ಟಿದ್ದಕ್ಕೆ ಬೇಸರ ಇದೆಯೆ?

ಖಂಡಿತ ಬೇಸರ ಇಲ್ಲ. ಏಕೆಂದರೆ ನಾನು ಸಿನಿಮಾ ಉದ್ಯಮದ ಕೆಲಸಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡೇ ಇದ್ದೆ. ನಾನು ಹೊಸ ಹೊಸ ತಂತ್ರಜ್ಞಾನಗಳನ್ನು ಕಲಿತುಕೊಂಡೆ. ಪ್ರಾಂಶುಪಾಲ ಆಗಿದ್ದ ಅವಧಿ ನನಗೆ ಸಹಾಯ ಮಾಡಿದೆ. ಇಂದಿನ ಅಗತ್ಯಗಳಿಗೆ ಬೇಕಿರುವಂತಹ ಸಿನಿಮಾ ಮಾಡಲು ಹೊಸ ವಿಚಾರಗಳನ್ನು ಕಲಿತೆ. 86ನೆಯ ವಯಸ್ಸಿನಲ್ಲಿ ಸಿನಿಮಾ ನಿರ್ದೇಶನ ಮಾಡುತ್ತಿರುವ ಇನ್ನೊಬ್ಬ ವ್ಯಕ್ತಿ ಭಾರತದಲ್ಲಿ ಇರಲಿಕ್ಕಿಲ್ಲ. ರಾಜ್‌ಕುಮಾರ್ ಕುಟುಂಬದ ಜೊತೆ ನನಗೆ ನಿಕಟ ಒಡನಾಟ ಇರುವ ಕಾರಣ ನಾನು ಹೇಳಿದ ತಕ್ಷಣ ಪುನೀತ್, ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರು ಒಂದೊಂದು ಹಾಡು ಹಾಡಿದ್ದಾರೆ ಈ ಸಿನಿಮಾದಲ್ಲಿ. ವಿಜಯ ರಾಘವೇಂದ್ರ ಕೂಡ ಒಂದು ಹಾಡು ಹಾಡಿದ್ದಾರೆ.

ಅನಂತ್ ನಾಗ್ ಮತ್ತು ನೀವು ಮತ್ತೆ ಜೊತೆಯಾಗಿದ್ದು ಕೂಡ ಈ ಸಿನಿಮಾದ ವೈಶಿಷ್ಟ್ಯವೇ?

ಅನಂತ್ ನಾಗ್ ಅವರು 25 ವರ್ಷಗಳ ನಂತರ ನನ್ನ ಜೊತೆ ಮತ್ತೆ ಸಿನಿಮಾ ಮಾಡಿದ್ದಾರೆ. ಅನಂತ್ ನಾಗ್ ಅವರು ನನ್ನಿಂದ ಒಂದು ರೂಪಾಯಿಯನ್ನೂ ಅಪೇಕ್ಷಿಸದೆ ನಟಿಸಲು ಒಪ್ಪಿಕೊಂಡರು.ಚಿತ್ರೀಕರಣದ ದಿನಾಂಕ ಹೇಳಿ, ಮುಹೂರ್ತ ಹೇಳಿ, ಕತೆ ಹೇಳುವ ಅಗತ್ಯವೂ ಇಲ್ಲ, ನಿಮ್ಮ ಕಥೆಗಳು ಚೆನ್ನಾಗಿಯೇ ಇರುತ್ತವೆ ಎಂದು ಹೇಳಿ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರು. ‘ಮಾಂಗಲ್ಯ ಬಂಧನ’ ನಾನು ಮತ್ತು ಅನಂತ್ ಸೇರಿ ಮಾಡಿದ್ದ ಕಡೆಯ ಸಿನಿಮಾ. ನನ್ನ ಒಂಬತ್ತು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

* ‘ಆಡುವ ಗೊಂಬೆ’ ಚಿತ್ರದ ಕಥೆ ಹುಟ್ಟಿದು ಹೇಗೆ?

ನಾನು ಹಳೆಯ ಶೈಲಿಯಲ್ಲಿ ಇದನ್ನು ಮಾಡಿದ್ದೇನೆ. ‘ಕಸ್ತೂರಿ ನಿವಾಸ’ದಲ್ಲಿ ಹಣೆಬರಹ ಕಥೆಯ ಒಂದು ಎಳೆ. ಅದು ಕೂಡ ಇದರಲ್ಲಿ ಇದೆ. ನಮ್ಮದೇ ಸಿನಿಮಾ ‘ಹೊಸ ಬೆಳಕು’ನಲ್ಲಿ ಇದ್ದ ‘ಕಣ್ಣೀರ ಧಾರೆ ಇದೇಕೆ...’ ಹಾಡಿನ ‘ವಿಧಿಯಾಟ ಏನೋ ಬಲ್ಲವರು ಯಾರೋ, ನಾಳೆ ಏನೆಂದು ಹೇಳುವವರು ಯಾರೋ, ಬಂದದ್ದು ಬರಲೆಂದು ನಗುನಗುತಾ ಇರಲು, ವಿನೋದ ವಿಷಾದ ಇದೇಕೆ ಇದೇಕೆ’ ಎಂಬ ಸಾಲುಗಳು ನನ್ನಲ್ಲಿ ಬಹಳ ಆಸಕ್ತಿ ಮೂಡಿಸಿದ್ದವು. ಆ ಸಾಲುಗಳನ್ನು ಮತ್ತು ‘ಕಸ್ತೂರಿ ನಿವಾಸ’ವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಕಥೆ ರೂಪಿಸಿದೆ. ‘ಬೊಂಬೆ ಆಡ್ಸೋವ್ನು ಮೇಲೆ ಕುಂತವ್ನೆ’ ಹಾಡು, ‘ಈ ಭೂಮಿ ಬಣ್ಣದ ಬುಗುರಿ’ ಹಾಡು... ಇವೆಲ್ಲ ಪ್ರೇರಣೆ ನೀಡಿವೆ.

ವಿಧಿಯು ಮನುಷ್ಯನೊಬ್ಬನ ಜೀವನದಲ್ಲಿ ಹೇಗೆಲ್ಲ ಆಟ ಆಡುತ್ತದೆ, ಅದನ್ನು ಮನುಷ್ಯ ಹೇಗೆ ಸ್ವೀಕರಿಸಬೇಕು ಅನ್ನುವುದನ್ನು ಇಟ್ಟುಕೊಂಡು, ಈಗಿನ ಕಾಲಕ್ಕೆ ತಕ್ಕಂತೆ ಕಥೆ ಮಾಡಿದೆ. ಇದು ನಮ್ಮದೇ ಪರಿಸರದಲ್ಲಿ ನಡೆಯುವ ಕಥೆ. ಇದರಲ್ಲಿ ಹೊಡೆದಾಟದ ದೃಶ್ಯಗಳು ಇಲ್ಲ, ಕಾಲೇಜಿನ ದೃಶ್ಯಗಳಿಲ್ಲ, ಪ್ರೇಮಕಥೆ ಇಲ್ಲ.

* ಚಿತ್ರಕ್ಕೆ ಸಂಚಾರಿ ವಿಜಯ್ ಅವರನ್ನು ಆಯ್ಕೆ ಮಾಡಿದ್ದು ಏಕೆ?

ಸಂಚಾರಿ ವಿಜಯ್ ಅಭಿನಯದ ‘ನಾನು ಅವನಲ್ಲ ಅವಳು’ ನೋಡಿದ ನಂತರ, ಅವರನ್ನು ಇಟ್ಟುಕೊಂಡು ಒಂದು ಸಿನಿಮಾ ಏಕೆ ಮಾಡಬಾರದು ಎಂದು ನನಗೆ ಅನಿಸಿತ್ತು. ವಿಜಯ್ ಅವರ ಅಭಿನಯದ ಬಗ್ಗೆ ನನಗೆ ಬಹಳ ಗೌರವ ಇದೆ. ಹಾಗಾಗಿ, ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಥೆ ಹೆಣೆದೆ. ಈ ಸಿನಿಮಾದಲ್ಲಿ ಅನಂತ್ ನಾಗ್ ಪಾತ್ರ ಬಹಳ ಮುಖ್ಯವಾದದ್ದು.

* ಚಿತ್ರೀಕರಣ ಎಲ್ಲಿ ನಡೆದಿದೆ?

ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ನಡೆದಿದೆ. ಹದಿನೈದರಿಂದ ಇಪ್ಪತ್ತು ದಿನ ಚಿಕ್ಕಮಗಳೂರಿನಲ್ಲಿ, ಹನ್ನೆರಡು ದಿನ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಹಿಂದಿನ ವರ್ಷ ಶುರುವಾದ ಸಿನಿಮಾ ಕೆಲಸ ಈಗ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಮತ್ತು ಸೆನ್ಸಾರ್ ಹಂತದಲ್ಲಿ ತುಸು ವಿಳಂಬ ಆಯಿತು. ನವೆಂಬರ್ 1ರಂದೇ ಇದು ಬಿಡುಗಡೆ ಆಗಬೇಕಿತ್ತು.

ಹಳೆ ಕಾಲಕ್ಕೂ ಹೊಸ ಕಾಲಕ್ಕೂ ಒಂದು ಸೇತುವೆ ಕಟ್ಟಿದ್ದೇನೆ ಈ ಸಿನಿಮಾದಲ್ಲಿ. ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಒಳ್ಳೆಯ ಕಥೆ ಇದರಲ್ಲಿ ಇದೆ. ಹೊಸ ನಟಿಯರು ಕೂಡ ಬಹಳ ಚೆನ್ನಾಗಿ ನಟಿಸಿದ್ದಾರೆ.

ಚಿತ್ರೀಕರಣದ ದಿನಾಂಕ ಹೇಳಿ, ಮುಹೂರ್ತ ಹೇಳಿ, ಕತೆ ಹೇಳುವ ಅಗತ್ಯವೂ ಇಲ್ಲ, ನಿಮ್ಮ ಕಥೆಗಳು ಚೆನ್ನಾಗಿಯೇ ಇರುತ್ತವೆ ಎಂದು ಹೇಳಿ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರು. ‘ಮಾಂಗಲ್ಯ ಬಂಧನ’ ನಾನು ಮತ್ತು ಅನಂತ್ ಸೇರಿ ಮಾಡಿದ್ದ ಕಡೆಯ ಸಿನಿಮಾ. ನನ್ನ ಒಂಬತ್ತು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

‘ಆಡುವ ಗೊಂಬೆ’ ಚಿತ್ರದ ಕಥೆ ಹುಟ್ಟಿದು ಹೇಗೆ?

ಚಿತ್ರಕ್ಕೆ ಸಂಚಾರಿ ವಿಜಯ್ ಅವರನ್ನು ಆಯ್ಕೆ ಮಾಡಿದ್ದು ಏಕೆ?

ಚಿತ್ರೀಕರಣ ಎಲ್ಲಿ ನಡೆದಿದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.