ವಿಜಯ್ ನಟನೆಯ ತಮಿಳು ಹಿಟ್ ಚಿತ್ರ ಮಾಸ್ಟರ್ ಹಿಂದಿ ರಿಮೇಕ್ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿಸಲಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪಿಂಕ್ವಿಲ್ಲಾ ವರದಿ ಮಾಡಿದ್ದು, ಸಲ್ಮಾನ್ ಖಾನ್ ಮಾಸ್ಟರ್ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದು, ಉತ್ತಮ ಸ್ಕ್ರಿಪ್ಟ್ ಸಹಿತ ಬರುವ ನಿರ್ದೇಶಕರಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದೆ. ಹಿಂದಿ ಆವೃತ್ತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕಿದೆ.

ತಮಿಳಿನಲ್ಲಿ ಮಾಸ್ಟರ್ ಸಿನಿಮಾವನ್ನು ಯುವ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನ ಮಾಡಿದ್ದರು. ಆಕ್ಷನ್ ಸಹಿತ ಕಥಾ ಹಂದರ ಹೊಂದಿದ್ದ ಮಾಸ್ಟರ್ ಚಿತ್ರ ಯಶಸ್ಸು ಗಳಿಸಿತ್ತು.

ವಿಜಯ್ ಜತೆಗೆ, ಮೊದಲ ಬಾರಿಗೆ ವಿಜಯ್ ಸೇತುಪತಿ ಕೂಡ ಮಾಸ್ಟರ್ ಚಿತ್ರದಲ್ಲಿ ನಟಿಸಿದ್ದರು.

ಜನವರಿಯಲ್ಲಿ ತೆರೆಕಂಡಿದ್ದ ಮಾಸ್ಟರ್ ಚಿತ್ರದ ಹಿಂದಿ ಅವತರಣಿಕೆ ಯಾವಾಗ ತಯಾರಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ, ಹಿಂದಿ ರಿಮೇಕ್ ಚಿತ್ರವನ್ನು ಮುರಾದ್ ಖೇತಾನಿ ಮತ್ತು ಎಂಡೆಮೊಲ್ ಶೈನ್ ನಿರ್ಮಿಸಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.