ಬೆಂಗಳೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂಬುದು ಎರಡು ಪರೀಕ್ಷೆಗಳಲ್ಲಿ ಸಾಬೀತಾಗಿದೆ ಎಂದು ಅಪೊಲೊ ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದೆ.

ಸೋಮವಾರ ರಾತ್ರಿ 8.20ಕ್ಕೆ ಸರಿಯಾಗಿ ಅಪೊಲೊ ಆಸ್ಪತ್ರೆ ವೈದ್ಯರು ಸಂಚಾರಿ ವಿಜಯ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ಅಪಘಾತದಲ್ಲಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಮೆದುಳುನಿಷ್ಕ್ರಿಯ

ಮೆದುಳಿನ ಕ್ರಿಯಾಶೀಲತೆಗೆ ಸಂಬಂಧಿಸಿದ ಆಪ್ನಿಯಾ ಪರೀಕ್ಷೆಯನ್ನು ಮಧ್ಯಾಹ್ನ 12.25 ರಲ್ಲಿ ಮತ್ತು ರಾತ್ರಿ 7.30ರಲ್ಲಿ ನಡೆಸಲಾಯಿತು. ವರದಿ ಪಾಸಿಟಿವ್ ಬಂದಿದೆ. ಅಂದರೆ, ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯಗೊಂಡಿದೆ. ಈ ವಿಚಾರವನ್ನು ಕುಟುಂಬಸ್ಥರು, ಸ್ಥಳೀಯ ಪೊಲೀಸರಿಗೆ ತಿಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮುಂದಿನ ಪ್ರಕ್ರಿಯೆಗಳಿಗಾಗಿ ‘ಜೀವ ಸಾರ್ಥಕತೆ‘ ಸಂಸ್ಥೆಯ ಅಧಿಕಾರಿಗಳು ಆಸ್ಪತ್ರೆಗೆ ಬಂದಿದ್ದಾರೆ. ವಿಜಯ್ ಅವರ ಅಂಗಾಂಗಗಳನ್ನು ದೇಹದಿಂದ ತೆಗೆಯುವುದು ಮತ್ತು ಅದನ್ನು ಕಸಿ ಮಾಡುವುದು ಮುಂದಿನ ಪ್ರಕ್ರಿಯೆಯಾಗಿದೆ. ಕಸಿ ಶಸ್ತ್ರಚಿಕಿತ್ಸೆಯು ಅಪೊಲೊ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ನಡೆಯಲಿದೆ. ಇದು ನಿಗದಿತ ಶಿಷ್ಟಾಚಾರದ ಪ್ರಕಾರವೇ ನಡೆಯುತ್ತದೆ. ವಿಜಯ್ ಅವರ ದೇಹ ಸ್ಥಿತಿ ಸ್ಥಿರವಾಗಿದೆ. ಅವರ ದೇಹ ಸ್ಥಿತಿಯ ವಿವಿಧ ಅಂಶಗಳ ಮೇಲೆ ವೈದ್ಯರ ತಂಡ ನಿಗಾ ವಹಿಸಿದೆ.

ಸಂಚಾರಿ ವಿಜಯ್ ಆರೋಗ್ಯ ಸ್ಥಿತಿ ಬಗ್ಗೆ ಅಪೊಲೊ ಆಸ್ಪತ್ರೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್:

ಇದನ್ನೂ ಓದಿ:
ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯ, ಬದುಕೋದು ಕಷ್ಟ: ವೈದ್ಯರ ಹೇಳಿಕೆ
ಸಂಚಾರಿ ವಿಜಯ್ ಚಿಕಿತ್ಸಾ ವೆಚ್ಚ ಭರಿಸಲು ಮುಂದೆ ಬಂದಡಿಸಿಎಂ ಅಶ್ವತ್ಥನಾರಾಯಣ
ಅಪಘಾತ: ನಟ ಸಂಚಾರಿ ವಿಜಯ್ ಸ್ಥಿತಿ ಗಂಭೀರ
ಕೋಮಾದಲ್ಲಿ ಸಂಚಾರಿ ವಿಜಯ್, ಆರೋಗ್ಯ ಸ್ಥಿತಿ ಗಂಭೀರ
ಶೀಘ್ರ ಗುಣಮುಖರಾಗಿ: ಸಂಚಾರಿ ವಿಜಯ್ಗೆ ಶಿವರಾಜ್ಕುಮಾರ್ ಹಾರೈಕೆ
ನಟ ಸಂಚಾರಿ ವಿಜಯ್ಗೆ ಅಪಘಾತ: ಸ್ಥಿತಿ ಗಂಭೀರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.