ಪ್ರಿಯಾಂಕ ಉಪೇಂದ್ರ ಅಭಿನಯದ 1980 ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಸುದೀಪ್, ‘ಈ ಚಿತ್ರದ ಬಿಡುಗಡೆ ವೇಳೆಗೆ ಈಗಿರುವ ಸಂಕಷ್ಟದ ಪರಿಸ್ಥಿತಿ ದೂರವಾಗಿ, ಜನರಿಂದ ಚಿತ್ರಮಂದಿರ ತುಂಬ ತುಳುಕುವಂತಾಗಲಿ’ ಎಂದು ಶುಭ ಕೋರಿದರು.

‘ವಿಭಿನ್ನ ಕಥೆ ಇಟ್ಟುಕೊಂಡು, ನಿರ್ದೇಶಕರು ಹೊಸ ಕಥೆ ಹೇಳಲು ಹೊರಟಿದ್ದಾರೆ. ಚಿತ್ರ ನಮ್ಮ ಫ್ಲಿಕ್ಸ್ ನಲ್ಲಿ ಅಕ್ಟೋಬರ್ 15ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹರಸಿ’ ಎಂದರು ರಿಯಲ್ ಸ್ಟಾರ್ ಉಪೇಂದ್ರ.

‘ನನ್ನ ಈ ಕಥೆಗೆ ಕೆಲವು ಇಂಗ್ಲಿಷ್ ಸಿನಿಮಾಗಳು ಸ್ಫೂರ್ತಿ ಎನ್ನಬಹುದು. ಪ್ಯಾರಲಲ್ ಯುನಿವರ್ಸಲ್ ಕಥೆ ಆಧಾರಿತ ಚಿತ್ರ ನನಗೆ ತಿಳಿದ ಮಟ್ಟಿಗೆ ಇದೇ ಮೊದಲು ಎನ್ನಬಹುದು. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂಬ ಭರವಸೆ ಇದೆ. ಎಲ್ಲರ ಹಾರೈಕೆ ಇರಲಿ’ ಎಂದರು ನಿರ್ದೇಶಕ ರಾಜ್ ಕಿರಣ್.

ನಟ ನಿರಂಜನ್ ಸುಧೀಂದ್ರ, ನಿರ್ಮಾಪಕ ಜಾಕ್ ಮಂಜು, ನಮ್ಮ ಫ್ಲಿಕ್ಸ್ ನ ವಿಜಯ ಕುಮಾರ್ ಶುಭ ಕೋರಿದರು.

ಈ ಚಿತ್ರವನ್ನು ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾಶ್ರೀ ಹಾಗೂ ಸ್ವಾಮಿರಾಜ್ ನಿರ್ಮಿಸಿದ್ದಾರೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಶನಿವಾರ ಸಂತೆ ಬಳಿ ನಡೆದಿದೆ. ರಾಜ್ ಕಿರಣ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ.

ತಾರಾಬಳಗದಲ್ಲಿ ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮ ಇದ್ದಾರೆ.

ಚಿಂತನ್ ವಿಕಾಸ್ ಸಂಗೀತ ನಿರ್ದೇಶನ, ಜೀವನ್ ಅಂತೋಣಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.