ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಪ್ರಕರಣ ಸಂಬಂಧ ನಟ ದಿಗಂತ್ ಎರಡನೇ ಬಾರಿ ಸಿಸಿಬಿ ವಿಚಾರಣೆಯನ್ನು ಬುಧವಾರ ಎದುರಿಸಿದರು.

ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ದಿಗಂತ್ಗೆ ಎರಡನೇ ಬಾರಿ ನೋಟಿಸ್ ನೀಡಿದ್ದರು. ಸಿಸಿಬಿ ಕಚೇರಿಗೆ ಹಾಜರಾದ ದಿಗಂತ್ ಅವರನ್ನು ಸತತ ಮೂರು ಗಂಟೆಗಳ ಕಾಲ ಅಧಿಕಾರಿಗಳು ವಿಚಾರಣೆ ನಡೆಸಿದರು.

ವಿಚಾರಣೆ ಬಳಿಕ ಪ್ರತಿಕ್ರಿಯಿಸಿದ ದಿಗಂತ್, 'ಸಿಸಿಬಿ ವಿಚಾರಣೆಗೆ ಇವತ್ತೂ ಸಹಕಾರ ನೀಡಿದ್ದೇನೆ. ಮುಂದಿನ ವಿಚಾರಣೆಗೆ ಕರೆದರೆ ಮತ್ತೆ ಬರುತ್ತೇನೆ' ಎಂದು ತಿಳಿಸಿದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗಂತ್ ಹಾಗೂ ಪತ್ನಿ ಐಂದ್ರಿತಾ ರೇ ಅವರನ್ನು ಸಿಸಿಬಿ ಅಧಿಕಾರಿಗಳು ಸೆ.16ರಂದು ವಿಚಾರಣೆ ನಡೆಸಿದ್ದರು. ಅಗತ್ಯವಿದ್ದರೆ ಮತ್ತೊಂದು ದಿನ ವಿಚಾರಣೆ ನಡೆಸಲಿದ್ದೇವೆ ಎಂದೂ ತಿಳಿಸಿದ್ದರು.

ವಿಚಾರಣೆ ವೇಳೆ ದಿಗಂತ್ ಮತ್ತು ಐಂದ್ರಿತಾರ ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದ ಸಿಸಿಬಿ, ಅದರಲ್ಲಿದ್ದ ಮಾಹಿತಿಗಳನ್ನು ರಿಟ್ರೀವ್ ಮಾಡಲಾಗಿತ್ತು. ಕಳೆದ ವಿಚಾರಣೆಯಲ್ಲಿ ದಿಗಂತ್ ನೀಡಿದ್ದ ಹೇಳಿಕೆಗಳನ್ನು ಆಧರಿಸಿ ಸಿಸಿಬಿ ಅಧಿಕಾರಿಗಳು ಮತ್ತೆ ವಿಚಾರಣೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.