‘ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ನಟ ರಿಷಿ ಅಭಿನಯದ ‘ರಾಮನ ಅವತಾರ’ ಸಿನಿಮಾ ಮೇ 10 ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ.

‘ಈ ಸಿನಿಮಾದ ಪಯಣ ಒಂದು ಪಾತ್ರದ ಸುತ್ತ ಇದೆ. ‘ರಾಮಕೃಷ್ಣ’ ಅವನಿಗೆ ಅವನೇ ಜೆಂಟಲ್ಮ್ಯಾನ್ ಎಂದು ಹೇಳಿಕೊಂಡು ಓಡಾಡುತ್ತಿರುತ್ತಾನೆ. ಅವನ ಜೀವನದಲ್ಲಿ ನಡೆದ ಘಟನೆಗಳೇನು? ಅವನನ್ನು ಅವು ಹೇಗೆ ಬದಲಾಯಿಸುತ್ತವೆ ಎನ್ನುವುದು ಕಥೆ. ‘ರಾಮನ ಅವತಾರ’ ಎಂದು ಏಕೆ ಹೆಸರಟ್ಟಿದ್ದೇವೆ ಎಂದರೆ, ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ರಾಮಾಯಣ ನಡೆಯುತ್ತದೆ. ಸೀತೆಯಂಥ ಹೆಂಡತಿ, ಲಕ್ಷ್ಮಣನ ರೀತಿ ತಮ್ಮ, ರಾವಣನಿಂದ ಆಗುವ ತೊಂದರೆ–ಈ ರೀತಿ ಸಮಸ್ಯೆಗಳು ಎಲ್ಲರ ಜೀವನದಲ್ಲಿ ಇರುತ್ತವೆ. ಅವುಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿಕಾಸ್ ಪಂಪಾಪತಿ.

‘ಈ ಸಿನಿಮಾ ಒಪ್ಪಿಕೊಳ್ಳಲು ಮುಖ್ಯ ಕಾರಣ ‘ಆಪರೇಷನ್ ಅಲಮೇಲಮ್ಮ’. ಜನರು ಅದೇ ರೀತಿ ಹಾಸ್ಯಭರಿತ ಚಿತ್ರ ಮಾಡಿ ಎನ್ನುತ್ತಿದ್ದರು. ಹಾಸ್ಯವೆನ್ನುವುದು ಸರಳವಾದ ಜಾನರ್ ಅಲ್ಲ. ನಿರ್ದೇಶಕರಾದ ವಿಕಾಸ್ ಹಾಸ್ಯಮಿಶ್ರಿತವಾದ ಒಂದು ಅದ್ಭುತವಾದ ಕಥೆಯನ್ನು ಸಿನಿಮಾದಲ್ಲಿ ಹೇಳಿದ್ದಾರೆ. ಈಗ ನಡೆಯುವ ಘಟನೆಗೆ ರಾಮಾಯಣದ ಮೌಲ್ಯವನ್ನು ಲೇಪಿಸಿದ್ದಾರೆ’ ಎಂದರು ರಿಷಿ. ಚಿತ್ರದಲ್ಲಿ ಪ್ರಣೀತಾ ಸುಭಾಷ್, ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.